ಕೃಷಿ ಕ್ಷೇತ್ರ : ಅಂತಾರಾಷ್ಟ್ರೀಯ ಗಮನ ಸಂಶೋಧಕಿ ಚೈತನ್ಯ ; ಜರ್ಮನಿಯಲ್ಲಿ ಪ್ರಬಂಧ ಮಂಡನೆ
ಬಳ್ಳಾರಿ, 13 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಆರ್ಥಿಕಶಾಸ್ತ್ರ ವಿಭಾಗದ ಪಿಎಚ್‍.ಡಿ ಸಂಶೋಧಕಿ ಕುಮಾರಿ ಚೈತನ್ಯ ಗಂಗಾಧರ ಅವರು ಜರ್ಮನಿಯ ಬಾನ್ ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು, ತಮ್ಮ ಸಂಶೋಧನಾ ಪ್ರಬಂಧವನ್ನು ಪ್ರಸ್ತುತಪಡ
ಕೃಷಿ ಕ್ಷೇತ್ರ : ಅಂತಾರಾಷ್ಟ್ರೀಯ ಗಮನ ಸಂಶೋಧಕಿ ಚೈತನ್ಯ : ಜರ್ಮನಿಯಲ್ಲಿ ಪ್ರಬಂಧ ಮಂಡನೆ


ಕೃಷಿ ಕ್ಷೇತ್ರ : ಅಂತಾರಾಷ್ಟ್ರೀಯ ಗಮನ ಸಂಶೋಧಕಿ ಚೈತನ್ಯ : ಜರ್ಮನಿಯಲ್ಲಿ ಪ್ರಬಂಧ ಮಂಡನೆ


ಬಳ್ಳಾರಿ, 13 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಆರ್ಥಿಕಶಾಸ್ತ್ರ ವಿಭಾಗದ ಪಿಎಚ್‍.ಡಿ ಸಂಶೋಧಕಿ ಕುಮಾರಿ ಚೈತನ್ಯ ಗಂಗಾಧರ ಅವರು ಜರ್ಮನಿಯ ಬಾನ್ ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು, ತಮ್ಮ ಸಂಶೋಧನಾ ಪ್ರಬಂಧವನ್ನು ಪ್ರಸ್ತುತಪಡಿಸಿ ರಾಜ್ಯದ ಕೃಷಿ ಪಂಡಿತರ ಗಮನ ಸೆಳೆದು, ಕೃಷಿ ಕ್ಷೇತ್ರದ ಗಮನ ಸೆಳೆದಿದ್ದಾರೆ.

ಕುಮಾರಿ ಚೈತನ್ಯ ಗಂಗಾಧರ ಅವರು, `ಬೆಂಗಳೂರು ಗ್ರಾಮೀಣ ಮತ್ತು ನಗರ ಸಂಕ್ರಮಣದಲ್ಲಿ ಆಹಾರ ಬಳಕೆ ಮಾದರಿ ಮತ್ತು ಭೂ-ಬಳಕೆ ಬದಲಾವಣೆಗಳ ಗತಿಶೀಲತೆ' ವಿಷಯದ ಸಂಶೋಧನಾ ಪ್ರಬಂಧವು ನಗರೀಕರಣ, ಆಹಾರ ಬಳಕೆ ಪದ್ಧತಿ ಹಾಗೂ ಕೃಷಿ ಭೂ-ಬಳಕೆಯ ನಡುವಿನ ಸಂಬಂಧವನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಅರ್ಥಪೂರ್ಣವಾಗಿ ವಿಶ್ಲೇಷಿಸುತ್ತದೆ.

ಈ ವಿಷಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಷಯ ತಜ್ಞರು ಮತ್ತು ನೀತಿ ರೂಪಕ ತಜ್ಞರಿಂದ ವಿಶೇಷ ಮೆಚ್ಚುಗೆ ಪಡೆದು, ಆಹಾರ ಭದ್ರತೆ ಹಾಗೂ ಸತತ ಅಭಿವೃದ್ಧಿ ಸಂಬಂಧಿತ ಜಾಗತಿಕ ಚರ್ಚೆಗಳಲ್ಲಿ ವಿಶೇಷವಾಗಿ ಪರಿಗಣಿಸಲ್ಪಟ್ಟು, ಚರ್ಚೆಗೆ ಒಳಗಾಗಿದೆ.

ಕುಮಾರಿ ಚೈತನ್ಯ ಗಂಗಾಧರ ಅವರು ಇವರು ಬಳ್ಳಾರಿಯ ಜಿಂದಾಲ್ ಕಂಪನಿಯ ಉದ್ಯೋಗಿ ಗಂಗಾಧರ ಹಾಗೂ ಶ್ರೀಮತಿ ಮಂಗಳಗೌರಿ ಇವರ ದ್ವಿತೀಯ ಪುತ್ರಿ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande