ಹಣ ಲೂಟಿಗಾಗಿ ಗಣತಿ : ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪ
ಬಳ್ಳಾರಿ, 13 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕದಲ್ಲಿ ಸೆಪ್ಟಂಬರ್ 22 ರಿಂದ ನಡೆಯಲಿರುವ ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಸರ್ವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ `ದುಡ್ಡು ಮಾಡುವ'' ತಂತ್ರಗಾರಿಕೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಬಿ. ಶ್ರೀರಾಮುಲು ಅವರು
ಹಣ ಲೂಟಿಗಾಗಿ ಗಣತಿ : ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪ


ಹಣ ಲೂಟಿಗಾಗಿ ಗಣತಿ : ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪ


ಬಳ್ಳಾರಿ, 13 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕದಲ್ಲಿ ಸೆಪ್ಟಂಬರ್ 22 ರಿಂದ ನಡೆಯಲಿರುವ ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಸರ್ವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ `ದುಡ್ಡು ಮಾಡುವ' ತಂತ್ರಗಾರಿಕೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಆರೋಪಿಸಿದ್ದಾರೆ.

ಗೃಹ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್ ನಾಯಕ್ ಅವರು ಸಿದ್ದರಾಮಯ್ಯ ಅವರ ಬಲಗೈ ಬಂಟ. ತನ್ನ ಆಪ್ತನಿಗೆ ರಾಜಕೀಯವಾಗಿ ಹುದ್ದೆಯನ್ನು ನೀಡಿ, ಬಲಪಡಿಸಿ, ಹಣವನ್ನು ಮಾಡುವ ತಂತ್ರವನ್ನು - ಷಡ್ಯಂತ್ರವನ್ನು ಮುಖ್ಯಮಂತ್ರಿಗಳು ಹೊಂದಿದ್ದಾರೆ ಎಂದರು.

10 ವರ್ಷಗಳ ಹಿಂದೆ ಕೇವಲ 150 ಕೋಟಿ ರೂಪಾಯಿ ಖರ್ಚು ಮಾಡಿ 54 ಪ್ರಶ್ನೆಗಳ ಪ್ರಶ್ನಾವಳಿಯ ಮೂಲಕಕ ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ ಮತ್ತು ಜಾತಿ ಗಣತಿ ನಡೆಸಲಾಗಿತ್ತು. ಈಗ, 60 ಪ್ರಶ್ನೆಗಳ ಪ್ರಶ್ನಾವಳಿಯ ಮೂಲಕ ಈ ಮೊತ್ತವು 420 ಕೋಟಿ ರೂಪಾಯಿ ತಲುಪಿದೆ ಎಂದು ಟೀಕಿಸಿದರು.

ಈಬಾರಿಯ ಗಣತಿಯಲ್ಲಿ 52 ಜಾತಿಗಳ ಮುಂದೆ `ಕ್ರಿಶ್ಚಿಯನ್' ಪದ ಸೇರಿದೆ. ಕೆಲ ಜಾತಿಗಳ ಮುಂದೆ `ಕ್ರಿಶ್ಚಿಯನ್' ಪದ ಸೇರಿಸುವಲ್ಲಿ ಸಿದ್ದರಾಮಯ್ಯ ಅವರು ಪ್ರಭಲ ಜಾತಿಗಳಲ್ಲಿಯ ಒಗ್ಗಟ್ಟನ್ನು ಮುರಿಯುವ ಹುನ್ನಾರ ನಡೆಸಿದಂತಿದೆ. ಕೆಲ ದೊಡ್ಡ ಮತ್ತು ಪ್ರಭಲ ಜಾತಿಗಳನ್ನು ದುರ್ಬಲಗೊಳಿಸುವ ಷಡ್ಯಂತ್ರವನ್ನು ತೋರಿದ್ದಾರೆ ಎಂದರು.

`ಗ್ಯಾರೆಂಟಿ' ಯೋಜನೆಯಿಂದ ಕರ್ನಾಟಕದಲ್ಲಿ ಬಡ ಮತ್ತು ಮಧ್ಯಮ ವರ್ಗದವರ ಆರ್ಥಿಕ ಸ್ಥಿತಿಗತಿಗಳು ಸುಧಾರಿಸಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರವೇ ಬಿಪಿಎಲ್ ಕಾರ್ಡ್‍ಗಳನ್ನು ರದ್ದು ಮಾಡಲಾಗುತ್ತಿದೆ ಎಂದು ದ್ವಂದದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬಿ. ಶ್ರೀರಾಮುಲು ಅಭಿಮಾನಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande