ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕ ಮನಗೂಳಿ ಕಿಡಿ
ವಿಜಯಪುರ, 13 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ಅಶೋಕ ಮನಗೂಳಿ ಹೇಳಿದರು. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾತನಾಡಿದ ಅವರು, ಸರ್ವೇ ನಂಬರ 842/1ಅ ಜಾಗವನ್ನು ತೆರವುಗೊಳಿಸಲು ಕೋರ್ಟ್ ಆದೇಶ ಮಾಡಿತ್ತು. ಅದರಂತೆ ಸಿಂದಗಿ ಪಟ್
ಶಾಸಕ


ವಿಜಯಪುರ, 13 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ಅಶೋಕ ಮನಗೂಳಿ ಹೇಳಿದರು.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾತನಾಡಿದ ಅವರು, ಸರ್ವೇ ನಂಬರ 842/1ಅ ಜಾಗವನ್ನು ತೆರವುಗೊಳಿಸಲು ಕೋರ್ಟ್ ಆದೇಶ ಮಾಡಿತ್ತು. ಅದರಂತೆ ಸಿಂದಗಿ ಪಟ್ಟಣದ ಪುರಸಭೆ ಅಧಿಕಾರಿಗಳು ಕಾರ್ಯಾಚರಣೆ ಮಾಡಿದ್ದಾರೆ. ಇದರಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನಗೂಳಿ ಕುಟುಂಬ ಯಾವುದೇ ಜಾಗವನ್ನು ಕಬಳಿಸಿಲ್ಲ. ಅಲ್ಲದೇ, ತೆರವುಗೊಳಿಸಿದ 84 ಕುಟುಂಬಕ್ಕೆ ಮನಗೂಳಿ ಕುಟುಂಬದಿಂದ ವೈಯಕ್ತಿಕ 25 ಸಾವಿರ ನೀಡಲು ತೀರ್ಮಾನ ಮಾಡಿದ್ದೇವೆ. ಅದರ ಜೊತೆಗೆ ಸರ್ಕಾರದೊಂದಿಗೆ ಚರ್ಚಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande