ಅಪ್ರತಿಮ ಕನ್ನಡ ಹೋರಾಟಗಾರ, ವಿಜ್ಞಾನ ಲೇಖಕ ‘ಸ.ರ.ಸುದರ್ಶನ ತಿಂಗಳ ನೆನಪು’
ಅಪ್ರತಿಮ ಕನ್ನಡ ಹೋರಾಟಗಾರ, ವಿಜ್ಞಾನ ಲೇಖಕ ‘ಸ.ರ.ಸುದರ್ಶನ ತಿಂಗಳ ನೆನಪು’
ಅಪ್ರತಿಮ ಕನ್ನಡ ಹೋರಾಟಗಾರ, ವಿಜ್ಞಾನ ಲೇಖಕ ‘ಸ.ರ.ಸುದರ್ಶನ ತಿಂಗಳ ನೆನಪು’


ಬೆಂಗಳೂರು, 13 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಅಗ್ರಮಾನ್ಯ ಕನ್ನಡಪರ ಹೋರಾಟಗಾರ, ಚಿಂತಕ, ಮೈಸೂರಿನ ಸುಸಜ್ಜಿತ ನೃಪತುಂಗ ಕನ್ನಡ ಶಾಲೆಯ ಉಪಾಧ್ಯಕ್ಷ ಸ. ರ. ಸುದರ್ಶನ ಇದೇ ಆಗಸ್ಟ್ 17 ರಂದು ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನರಾದರು. ಅವರ ನೆನಪಿನಲ್ಲಿ ೧೭-೦೯-೨೦೨೫ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮ ವ್ಯವಸ್ಥೆ ಆಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಭೂವಿಜ್ಞಾನ ಸ್ನಾತಕೋತ್ತರ ಪದವಿಯನ್ನು ಕನ್ನಡದಲ್ಲಿ ಬರೆದು ಉನ್ನತ ದರ್ಜೆಯಲ್ಲಿ ಪಡೆದ ಮೊದಲಿಗರು. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಉಪ ನಿರ್ದೇಶಕರಾಗಿದ್ದ ಅವರು ಗೋಕಾಕ್ ಚಳವಳಿ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ‘ಮೈಸೂರು ಕನ್ನಡ ಕ್ರಿಯಾ ಸಮಿತಿ’ಯ ಸ್ಥಾಪಕರಲ್ಲೊಬ್ಬರು,

ಕಾರ್ಯದರ್ಶಿಯಾಗಿ ತಮ್ಮ ಅಂತಿಮ ದಿನದವರೆಗೆ ಸಕ್ರಿಯರಾಗಿದ್ದರು. ಗೋಕಾಕ್ ಚಳವಳಿಯ ನಂತರ ನಡೆದ ಎಲ್ಲ ಕನ್ನಡ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ನೇರ ಹೋರಾಟಗಳಲ್ಲಿ ಪಾಲ್ಗೊಂಡು ಕನ್ನಡಕ್ಕಾಗಿ ಜೈಲುವಾಸ, ಪೊಲೀಸ್ ಕೇಸ್‌ಗಳನ್ನು ಎದುರಿಸಿದವರು. ಕನ್ನಡ ವಿಚಾರವಾಗಿ ನ್ಯಾಯಾಲಯದಲ್ಲಿ ಹೋರಾಡಿದವರು.

ವಿದ್ಯಾರ್ಥಿಯಾಗಿದ್ದಾಗ ಗೆಳೆಯರೊಡನೆ ‘ಚೇತನ ಕನ್ನಡ ಸಂಘ’ ಸ್ಥಾಪಿಸಿ ಕಾರ್ಯದರ್ಶಿಯಾಗಿದ್ದರು. ಸಂಘವು ಮೈಸೂರಿನಲ್ಲಿ ವಿಶಿಷ್ಟವಾದ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಮೈಸೂರಿನಲ್ಲಿ ಮನೆಮಾತಾಗಿತ್ತು. ರಾಜ್ಯಮಟ್ಟ ಸಂಘಟನೆ ಕನ್ನಡ ಶಕ್ತಿ ಕೇಂದ್ರದ ಸಂಘಟನಾ ಕಾರ್ಯದರ್ಶಿಯಾಗಿದ್ದರು.

‘ಬದಲಾಗುತ್ತಿರುವ ಭೂಮಿ' ಎಂಬ ಪುಸ್ತಕ ಪ್ರಕಟಿಸಿದ್ದರು. ಸುದರ್ಶನ್ ಅನುವಾದಿಸಿದ ‘ಭೂ ಸ್ವರೂಪ ವಿಜ್ಞಾನ' ಮತ್ತು ಮೈಸೂರು ವಿವಿಯೇ ಪ್ರಕಟಣೆ ಮಾಡಿದೆ. ‘ಭೂ ವಿಜ್ಞಾನ ವಿಷಯ ವಿಶ್ವಕೋಶ'ದ ಗೌರವ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಎಲ್‌ಎಲ್‌ಬಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಉತ್ತರಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರ¸ ನಾಲ್ಕು ಸಂಪುಟಗಳ ಇಂಗ್ಲಿಷ್ ಕನ್ನಡ ನಿಘಂಟನ್ನು ಸಂಕ್ಷಿಪ್ತಗೊಳಿಸಿ, ೨೫,೦೦೦ ಪದಗಳಿರುವ 'ಸಂಕ್ಷಿಪ್ತ ಇಂಗ್ಲಿಷ್ ಕನ್ನಡ ನಿಘಂಟು' ಸಿದ್ಧಪಡಿಸಿದ್ದು, ಅಚ್ಚಿನಲ್ಲಿದೆ. ಪ್ರಾರಂಭದಲ್ಲಿ ಸ್ವತಃ ಪ್ರಕಟಿಸಿದ 'ಶಾಲಾ ವಿದ್ಯಾರ್ಥಿಗಳಿಗಾಗಿ ಇಂಗ್ಲಿಷ್ ಕನ್ನಡ ನಿಘಂಟು' ನಂತರ ವಿವಿಧ ಪ್ರಕಾಶಕರಿಂದ ೧೫ನೇ ಮುದ್ರಣ ಕಂಡಿದೆ. ರಾಜ್ಯ ಸರ್ಕಾರದ ಕರ್ನಾಟಕ ವಿಜ್ಞಾನ ಅಕಾಡೆಮಿಯಲ್ಲಿ ಸದಸ್ಯರಾಗಗಿದ್ದರು.

ಕನ್ನಡ ಶಿಕ್ಷಣ ಮಾಧ್ಯಮವಾಗಬೇಕೆಂದು ಛಲಬಿಡದ ತ್ರಿವಿಕ್ರಮನಂತೆ ಮೂರು ದಶಕಗಳಿಂದ ಹೋರಾಡುತ್ತಿದ್ದ ಸುದರ್ಶನ ಅವರ ಕನ್ನಡ ನಿಷ್ಠೆ ಪ್ರಶ್ನಾತೀತವಾದದ್ದು. ಅರ್ಧ ಶತಮಾನದಿಂದ ಕನ್ನಡ ಚಳವಳಿಯಲ್ಲಿ ತೊಡಗಿಕೊಂಡಿದ್ದ ಅವರ ಕನ್ನಡ ಕಾಯಕವನ್ನು ನೆನೆಯಲು ೧೭-ಸೆಪ್ಟಂಬರ್-೨೦೨೫ರ ಬುಧವಾರ ಸಂಜೆ ೫.೦೦ಕ್ಕೆ ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶಾಂತಿ ಕೊಠಡಿಯಲ್ಲಿ ‘ಕನ್ನಡ ವೀರಯೋಧ ಸ.ರ.ಸುದರ್ಶನ ಅವರ ತಿಂಗಳ ನೆನಪು’ ಕಾರ್ಯಕ್ರಮ ನಡೆಯಲಿದೆ.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಅಧ್ಯಕ್ಷತೆ ವಹಿಸಲಿದ್ದು, ವಿಜ್ಞಾನ ಲೇಖಕ ಡಾ.ಟಿ.ಆರ್. ಅನಂತರಾಮು, ಸಂಶೋಧಕ ಡಾ. ಆರ್. ಶೇಷಶಾಸ್ತಿç, ಸುದರ್ಶನ ಪುತ್ರಿ ಶ್ರೇಷ್ಠ ಕಲಾವಿದೆ ನುಡಿ ಸುದರ್ಶನ, ಕನ್ನಡ ಹೋರಾಟಗಾರರಾದ ವ.ಚ. ಚನ್ನೇಗೌಡ, ರಾ.ನಂ. ಚಂದ್ರಶೇಖರ, ಬಿ.ವಿ.ರವಿಕುಮಾರ್, ಅಶ್ವತ್ಥನಾರಾಯಣ, ಮ.ಚಂದ್ರಶೇಖರ, ಅವರು ನುಡಿನಮನ ಸಲ್ಲಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande