ಮನೆಗಳ್ಳತನ ; ಇಬ್ಬರು ಆರೋಪಿಗಳ ಬಂಧನ
ವಿಜಯಪುರ, 12 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿಜಯಪುರದಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು. ಶರಣಬಸು ಮಾಹಾದೇವ ಜಾಲವಾದ 31, ಪ್ರಕಾಶ ನಿಂಗಪ್ಪ ಕಂಬಾರ 21 ಬಂಧಿತರಿ. ಇಬ್ಬರೂ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ
ಕಳ್ಳತನ


ವಿಜಯಪುರ, 12 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿಜಯಪುರದಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು.

ಶರಣಬಸು ಮಾಹಾದೇವ ಜಾಲವಾದ 31, ಪ್ರಕಾಶ ನಿಂಗಪ್ಪ ಕಂಬಾರ 21 ಬಂಧಿತರಿ. ಇಬ್ಬರೂ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದರು. ಇನ್ನು ಗಾಲೀಬ ಚನ್ನವಿರಪ್ಪ ಹಡಪದ ಆಲಮೇಲ್ ಠಾಣೆಗೆ ಹಾಜರಾಗಿ ಮನೆಯ ಬಾಗಿಲು ಮುರಿದು ಒಳಗಡೆ ಇರುವ ಟ್ರೇಜರಿಯಲ್ಲಿಟ್ಟಿದ್ದ ಬೆಳ್ಳಿ ಮತ್ತು ಬಂಗಾರದ ಆಭರಣ ಹಾಗೂ ರೋಖ ಹಣ ಸೇರಿ ಒಟ್ಟು 6,07,500/- ಕಳ್ಳತನ ಮಾಡಿದ್ದು, ಅಲ್ಲದೆ ಮಂಜುನಾಥ ಗುರುಶಾಂತಪ್ಪ ಬೊಗೊಂಡಿ ಇವರ ಮನೆಯ ಬಾಗಿಲಿಗೆ ಹಾಕಿದ್ದ ಕೀಲಿ ಮುರಿದು ಒಳಗೆ ಹೋಗಿ ಮನೆಯ ಟ್ರೇಜರಿಯಲ್ಲಿಟ್ಟಿದ್ದ ಬೆಳ್ಳಿ ಮತ್ತು ಬಂಗಾರದ ಆಭರಣ ಹಾಗೂ ರೋಖ ಹಣ ಸೇರಿ ಒಟ್ಟು 2,05,000/- ಕಳ್ಳತನ ಮಾಡಿದ್ದು ಹಾಗೂ ರಾಜಕುಮಾರ ನಾಗಪ್ಪ ಕೊಣಶಿರಸಗಿ ಇವರ ಇವರ ಮನೆಯ ಬಾಗಿಲಿಗೆ ಹಾಕಿದ್ದ ಕೀಲಿ ಮುರಿದು ಒಳಗೆ ಹೋಗಿ ಮನೆಯ ಟ್ರೇಜರಿಯಲ್ಲಿಟ್ಟಿದ್ದ ಬೆಳ್ಳಿ ಮತ್ತು ಬಂಗಾರದ ಆಭರಣ ಹಾಗೂ ರೋಖ ಹಣ ಸೇರಿ ಒಟ್ಟು 2,47,000/- ಸಹ ಕಳ್ಳತನ ಮಾಡಿದ್ದು, ಹೀಗೆ ಎಲ್ಲವು ಸೇರಿ ಒಟ್ಟು 10,69,500/- ರೂ. ಮೌಲ್ಯದ ಬೆಳ್ಳಿ, ಬಂಗಾರ ಹಾಗೂ ರೋಖ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಕುರಿತು ಆಲಮೇಲ್ ಪೊಲೀಸ್ ಠಾಣೆಯಲ್ಲಿ ಕಲಂ: 331(4), 305 ಬಿಎನ್‌ಎಸ್-2023 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಪಿ ಲಕ್ಷ್ಮಣ ನಿಂಬರಗಿ ಆದೇಶದ ಮೇರೆಗೆ ಡಿಎಸ್‌ಪಿ ಜಗದೀಶ ಎಚ್.ಎಸ್, ನಾನಾಗೌಡ ಪೊಲೀಸ್ ಪಾಟೀಲ ಸಿಪಿಐ ಸಿಂದಗಿ ವೃತ್ತ ರವರ ಮಾರ್ಗದರ್ಶನದಲ್ಲಿ ಆಲಮೇಲ್ ಠಾಣೆಯ ಅರವಿಂದ ಅಂಗಡಿ, ಪಿಎಸ್‌ಐ (ಕಾ&ಸು), ಎಸ್.ಎಮ್. ಪಡಶೆಟ್ಟಿ ಪಿಎಸ್‌ಐ (ಅವಿ) ಹಾಗೂ ಸಿಬ್ಬಂದಿ ಜನರಾದ ಎಚ್.ಟಿ.ಗೋಡೆಕಾರ, ಸಲೀಮ ಸವದಿ, ಸಿದ್ರಾಯ ಪಾಟೀಲ, ಎಸ್. ಬಿ.ಯತ್ನಾಳ, ವ್ಹಿ.ಎಸ್.ಆಳೂರ, ಎಸ್.ಎಸ್.ಜಾಲಗೇರಿ, ಬಿ.ಎಸ್.ಮೇಡೆದಾರ, ಬಿ.ಜಿ.ಕ್ಷತ್ರಿ ರವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಿದ್ದು, ಸದರಿ ತಂಡವು ಪ್ರಕರಣದಲ್ಲಿ ವೈಜ್ಞಾನಿಕ ವಿಧಾನದಿಂದ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿತರಿಂದ ಅಂದಾಜು ಒಟ್ಟು 86 ಗ್ರಾಂ. ಬಂಗಾರದ ಆಭರಣಗಳು (ಅಂದಾಜು ಮೌಲ್ಯ: 8,60,000/-), 67 ಗ್ರಾಂ ಬೆಳ್ಳಿ ಆಭರಣಗಳನ್ನು (ಅಂದಾಜು ಮೌಲ್ಯ: 67,000/-) ಹಾಗೂ 05 ಮೋಟರ್ ಸೈಕಲ್‌ಗಳನ್ನು (ಅಂದಾಜು ಮೌಲ್ಯ: 1,25,000/-) ಹೀಗೆ ಒಟ್ಟು 10,52,000/- ಮೌಲ್ಯದ ಬಂಗಾರ, ಬೆಳ್ಳಿ ಹಾಗೂ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಸದರಿ ಪ್ರಕರಣದ ಆರೋಪಿತರನ್ನು ಪತ್ತೆ ಹಚ್ಚಿ, ಉತ್ತಮ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande