ವಿಜಯಪುರ, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿರುವ ಡೋಣಿ ನದಿ ಉಕ್ಕಿ ಹರಿಯುತ್ತಿದೆ. ಭಾರಿ ನೀರಿನಿಂದ ವಿಜಯಪುರ - ತಾಳಿಕೋಟೆ ಸೇತುವೆ ಜಲಾವೃತಗೊಂಡಿದೆ. ಅಲ್ಲದೇ, ಸೇತುವೆ ಜಲಾವೃತ ಹಿನ್ನೆಲೆ ವಿಜಯಪುರ - ತಾಳಿಕೋಟೆ ಸಂಪರ್ಕ ಸ್ಥಗಿತ ಆಗಿದೆ.
ಸೇತುವೆಯ ಎರಡು ಕಡೆ ಸಾಲಾಗಿ ವಾಹನಗಳು ನಿಂತುಕೊಂಡಿವೆ. ಇನ್ನು ಸೇತುವೆ ಮೇಲೆ ಉಕ್ಕಿ ಹರಿಯುತ್ತಿರುವ ನೀರಿನ ಮೇಲೆ ಬೈಕ್, ಬಸ್, ಕಾರುಗಳ ಸೇರಿದಂತೆ ಅನೇಕ ವಾಹನಗಳು ಸೇತುವೆ ದಡದಲ್ಲೆ ಲಾಕ್ ಆಗಿದ್ದಾವೆ. ಕೆಲವರು ನೀರಿನಲ್ಲಿ ಸಂಚಾರ ಮಾಡುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸರಿಲ್ಲದೆ ಹಲವರು ಪುಂಡಾಟ ಮುಂದುವರೆದಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande