ವಿಜಯಪುರ, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗಂಡನ ಕೊಲೆಗೆ ಯತ್ನಿಸಿದ ಪತ್ನಿಯನ್ನು ಬಂಧಿಸಸಲಾಗಿದೆ. ನಿನ್ನೆ ತಡರಾತ್ರಿ ಪತ್ನಿಯ ಪ್ರೇಮಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸಿದ್ದಪ್ಪ ಕ್ಯಾತಕೇರಿ ಶವ ಪತ್ತೆ ದೊರಕಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಕಳೆದ ಸಪ್ಟೆಂಬರ್ 1 ರಂದು ಪತಿ ಬೀರಪ್ಪ ಪೂಜಾರಿ (36) ಕೊಲ್ಲಲು ಪ್ರಿಯಕರನೊಂದಿಗೆ ಸೇರಿ ಆತನ ಪತ್ನಿ ಸುನಂದಾ ಯತ್ನಿಸಿದ್ದಳು.
ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಸಿದ್ದಪ್ಪ ಕ್ಯಾತಕೇರಿ ಶವ ಪತ್ತೆ ಸಿಕ್ಕಿದೆ.
ಸ್ಥಳಕ್ಕೆ ಝಳಕಿ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande