ನವದೆಹಲಿ, 10 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ಸಂಸದ ಹಾಗೂ ಲೋಕ ಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ತಮ್ಮ ಸಂಸದೀಯ ಕ್ಷೇತ್ರವಾದ ರಾಯ್ ಬರೇಲಿ ಪ್ರವಾಸ ಕೈಗೊಂಡಿದ್ದಾರೆ.
ಈ ವೇಳೆ ಹರ್ಚಂದ್‌ಪುರ ವಿಧಾನಸಭಾ ಕ್ಷೇತ್ರದ ಬೂತ್ ಕಾರ್ಯಕರ್ತರೊಂದಿಗೆ ದೇದೌಲಿ ಪ್ರದೇಶದ ಬಟೋಹಿ ರೆಸಾರ್ಟ್‌ನಲ್ಲಿ ಸಭೆ ನಡೆಸಿದರು. ನಂತರ ಮಧ್ಯಾಹ್ನ 11:45ಕ್ಕೆ ಶಾಂತಿ ಗ್ರ್ಯಾಂಡ್ ಹೋಟೆಲ್‌ನಲ್ಲಿ ಪ್ರಜಾಪತಿ ಸಮಾಜದ ಪ್ರತಿನಿಧಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಚರ್ಚಿಸಲಿದ್ದಾರೆ
ಇದಾದ ಬಳಿಕ ಮಧ್ಯಾಹ್ನ ಸದರ್ ವಿಧಾನಸಭಾ ಕ್ಷೇತ್ರದ ಗೋರಬಜಾರ್ ಚೌರಾಹಾದಲ್ಲಿ ಅಶೋಕ ಸ್ತಂಭವನ್ನು ಅನಾವರಣಗೊಳಿಸಿ. ನಂತರ ಅಮರ್ ಶಹೀದ್ ವೀರ್ ಪಾಸಿ ವನ್ ಗ್ರಾಮದಲ್ಲಿ ನಡೆದ ನೆಡುತೋಪು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa