ಟಿಯಾಂಜಿನ್, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಚೀನಾದ ಟಿಯಾಂಜಿನ್‌ನಲ್ಲಿ ನಡೆದ 25ನೇ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆ ಸಮಗ್ರ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಯೋತ್ಪಾದನೆ ಕುರಿತು ಕಠಿಣ ಸಂದೇಶ ರವಾನಿಸಿದ್ದಾರೆ.
ಪಹಲ್ಗಾಮ್ ದಾಳಿಯನ್ನು ಉಲ್ಲೇಖಿಸಿದ ಮೋದಿ, ಯಾವುದೇ ತಾರತಮ್ಯವಿಲ್ಲದೆ ಭಯೋತ್ಪಾದನೆಯ ಪ್ರತಿಯೊಂದು ರೂಪ ಹಾಗೂ ಬಣ್ಣವನ್ನು ವಿರೋಧಿಸುವುದು ಮಾನವೀಯತೆಯ ಕಡೆಗೆ ನಮ್ಮ ಕರ್ತವ್ಯ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
ಭದ್ರತೆ, ಶಾಂತಿ ಮತ್ತು ಸ್ಥಿರತೆ ಎಲ್ಲ ದೇಶದ ಪ್ರಗತಿಗೂ ಮೂಲ ಅಡಿಪಾಯವಾಗಿದ್ದು, ಭಯೋತ್ಪಾದನೆ ಈ ಗುರಿಗಳನ್ನು ಸಾಧಿಸುವಲ್ಲಿ ದೊಡ್ಡ ಅಡೆತಡೆ ಉಂಟುಮಾಡುತ್ತಿದೆ. ಭಯೋತ್ಪಾದನೆಯನ್ನು ಬಯಲಿಗೆಳೆದು ಬೆಂಬಲಿಸುವ ರಾಷ್ಟ್ರಗಳ ನಡವಳಿಕೆಯನ್ನು ಪ್ರಶ್ನಿಸಲೇಬೇಕಾಗಿದೆ. ಪಹಲ್ಗಾಮ್ ದಾಳಿಯಂತಹ ಘಟನೆಗಳು ಇಡೀ ಮಾನವೀಯತೆಯ ಮೇಲಿನ ನೇರ ದಾಳಿಯಾಗಿದ್ದು, ಈ ಕಷ್ಟದ ಸಂದರ್ಭದಲ್ಲಿ ಭಾರತದೊಂದಿಗೆ ನಿಂತ ಸ್ನೇಹಪರ ರಾಷ್ಟ್ರಗಳಿಗೆ ಧನ್ಯವಾದ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa