ಚಂಡೀಗಡ, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಹರಿಯಾಣದಲ್ಲಿ ಭಾರಿ ಮಳೆಯಿಂದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹಥಿನಿ ಕುಂಡ್ ಬ್ಯಾರೇಜ್‌ನ ಎಲ್ಲಾ ದ್ವಾರಗಳನ್ನು ತೆರೆಯಲಾಗಿದ್ದು, ದೆಹಲಿಗೆ ಎಚ್ಚರಿಕೆ ನೀಡಲಾಗಿದೆ.
ಸೋಮವಾರ ಬೆಳಗ್ಗೆ ನೀರಿನ ಹರಿವು 3.29 ಲಕ್ಷ ಕ್ಯೂಸೆಕ್ ದಾಖಲಾಗಿದ್ದು, ಮುಂದಿನ 25-30 ಗಂಟೆಗಳಲ್ಲಿ ದೆಹಲಿಗೆ ತಲುಪುವ ಸಾಧ್ಯತೆ ಇದೆ. ತಗ್ಗು ಪ್ರದೇಶಗಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.
ಸಿರ್ಸಾದಲ್ಲಿ ಎರಡು ಮನೆಗಳ ಗೋಡೆ ಕುಸಿದಿದ್ದು, 50 ಎಕರೆ ಬೆಳೆ ಹಾನಿಯಾಗಿದೆ. ಫರಿದಾಬಾದ್‌ನಲ್ಲಿ ಯಮುನಾ, ಕುರುಕ್ಷೇತ್ರದಲ್ಲಿ ಮಾರ್ಕಂಡ ಹಾಗೂ ಕೈಥಾಲ್‌ನಲ್ಲಿ ಘಗ್ಗರ್ ನದಿಗಳು ಉಕ್ಕಿ ಹರಿಯುತ್ತಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa