ನವದೆಹಲಿ, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬುಡಕಟ್ಟು ಭಾಷೆಗಳ ಸಂರಕ್ಷಣೆ ಮತ್ತು ಜಾಗತೀಕರಣಕ್ಕಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸೋಮವಾರ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ‘ಆದಿ ವಾಣಿ’ ಎಂಬ ವಿಶಿಷ್ಟ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಯಿತು.
ಈ ಆ್ಯಪ್ ಮೂಲಕ ಪ್ರಾರಂಭಿಕ ಹಂತದಲ್ಲಿ ಐದು ಬುಡಕಟ್ಟು ಭಾಷೆಗಳು ಜಾರ್ಖಂಡ್‌ನ ಮುಂಡಾರಿ, ಒಡಿಶಾದ ಸಂತಾಲಿ ಮತ್ತು ಪುಯಿ, ಛತ್ತೀಸ್‌ಗಢದ ಗೊಂಡಿ, ಮಧ್ಯಪ್ರದೇಶದ ಭಿಲಿ ಇವುಗಳನ್ನು ಹಿಂದಿ ಮತ್ತು ಇಂಗ್ಲಿಷ್‌ಗೆ ತಕ್ಷಣ ಅನುವಾದಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ದುರ್ಗಾದಾಸ್ ಉಯಿಕಿ ಅವರು, ಈ ಆ್ಯಪ್ ಮೂಲಕ ಬುಡಕಟ್ಟು ಭಾಷೆಗಳು ಡಿಜಿಟಲ್ ಮತ್ತು ಜಾಗತಿಕವಾಗಿ ಗುರುತಿಸಲ್ಪಡುವುದರ ಜೊತೆಗೆ ಜನರಿಗೆ ಸರ್ಕಾರದ ಯೋಜನೆಗಳ ಮಾಹಿತಿಯನ್ನೂ ತಲುಪಿಸಲು ಸಹಾಯವಾಗಲಿದೆ ಎಂದು ಹೇಳಿದರು.
ಈ ಆ್ಯಪ್ ಅಭಿವೃದ್ಧಿಯಲ್ಲಿ ಐಐಟಿ ದೆಹಲಿ, ಐಐಟಿ ಹೈದರಾಬಾದ್, ಐಐಟಿ ರಾಯ್ಪುರ ಮತ್ತು ಬಿಐಟಿಎಸ್ ಪಿಲಾನಿ ಮುಂತಾದ ತಾಂತ್ರಿಕ ಸಂಸ್ಥೆಗಳು ಪ್ರಮುಖ ಪಾತ್ರವಹಿಸಿದರೆ, ರಾಂಚಿ, ರಾಯ್ಪುರ, ಒಡಿಶಾ ಹಾಗೂ ಮಧ್ಯಪ್ರದೇಶದ ಬುಡಕಟ್ಟು ಸಂಶೋಧನಾ ಸಂಸ್ಥೆಗಳು ಅಗತ್ಯ ಪದಕೋಶ ಮತ್ತು ಭಾಷಾ ಸಂಪನ್ಮೂಲಗಳನ್ನು ಒದಗಿಸಿವೆ.
ಬಳಕೆದಾರರು ಪಠ್ಯ, ಧ್ವನಿ ಅಥವಾ ಡಾಕ್ಯುಮೆಂಟ್ ಅನ್ನು ಟೈಪ್ ಅಥವಾ ಅಪ್‌ಲೋಡ್ ಮಾಡುವ ಮೂಲಕ ತಕ್ಷಣ ಅನುವಾದ ಪಡೆಯಬಹುದು. ಇದರೊಂದಿಗೆ, ಆ್ಯಪ್ ನಿಘಂಟಿನಂತೆಯೂ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa