ಚಾಂಡಿಲ್‌ನಲ್ಲಿ ಎರಡು ಸರಕು ರೈಲುಗಳ ಮುಖಾಮುಖಿ ಡಿಕ್ಕಿ, ರೈಲು ಸಂಚಾರ ಸ್ಥಗಿತ
ಚಾಂಡಿಲ್, 09 ಆಗಸ್ಟ್ (ಹಿ.ಸ.) : ಆ್ಯಂಕರ್ : ಜಾರ್ಖಂಡ್‌ನ ಸರೈಕೇಲಾ ಖರ್ಸವಾನ್ ಜಿಲ್ಲೆಯ ಚಾಂಡಿಲ್ ಸಮೀಪ ಬೆಳಗಿನ ಜಾವ ಎರಡು ಸರಕು ರೈಲುಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಹಲವಾರು ಬೋಗಿಗಳು ಹಳಿತಪ್ಪಿವೆ. ಟಾಟಾನಗರ–ಬೊಕಾರೊ ಮಾರ್ಗದಲ್ಲಿ ಸಂಭವಿಸಿದ ಈ ಅಪಘಾತಕ್ಕೆ ಸಿಗ್ನಲಿಂಗ್ ದೋಷವೇ ಕಾರಣವೆಂದು ಆ
Derail


ಚಾಂಡಿಲ್, 09 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜಾರ್ಖಂಡ್‌ನ ಸರೈಕೇಲಾ ಖರ್ಸವಾನ್ ಜಿಲ್ಲೆಯ ಚಾಂಡಿಲ್ ಸಮೀಪ ಬೆಳಗಿನ ಜಾವ ಎರಡು ಸರಕು ರೈಲುಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಹಲವಾರು ಬೋಗಿಗಳು ಹಳಿತಪ್ಪಿವೆ.

ಟಾಟಾನಗರ–ಬೊಕಾರೊ ಮಾರ್ಗದಲ್ಲಿ ಸಂಭವಿಸಿದ ಈ ಅಪಘಾತಕ್ಕೆ ಸಿಗ್ನಲಿಂಗ್ ದೋಷವೇ ಕಾರಣವೆಂದು ಆರಂಭಿಕ ತನಿಖೆಯಲ್ಲಿ ಶಂಕಿಸಲಾಗಿದೆ.

ಘಟನೆ ಬಳಿಕ ಚಾಂಡಿಲ್–ಟಾಟಾನಗರ ಮತ್ತು ಚಾಂಡಿಲ್–ಬೊಕಾರೊ ಮಾರ್ಗಗಳಲ್ಲಿ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪರಿಹಾರ ಮತ್ತು ಪುನಃಸ್ಥಾಪನಾ ಕಾರ್ಯ ನಡೆಯುತ್ತಿದೆ. ಹಳಿಯನ್ನು ಸರಿಪಡಿಸಲು 24 ಗಂಟೆಗಳಿಗಿಂತ ಹೆಚ್ಚು ಸಮಯ ಬೇಕೆಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande