ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು : ಪ್ರಧಾನಿ ಮೋದಿ ಶ್ಲಾಘನೆ
ಬೆಂಗಳೂರು, 10 ಆಗಸ್ಟ್ (ಹಿ.ಸ.) : ಆ್ಯಂಕರ್ : ಬೆಂಗಳೂರು ನವ ಭಾರತ ನಿರ್ಮಿಸುವಲ್ಲಿ ಹಾಗೂ ಭಾರತವನ್ನು ಜಾಗತಿಕ ತಂತ್ರಜ್ಞಾನ ನಕ್ಷೆಯಲ್ಲಿ ಎತ್ತಿ ಹಿಡಿದ ನಗರ ಇದು. ಈ ಯಶಸ್ಸಿನ ಹಿಂದೆ ಬೆಂಗಳೂರಿನ ಜನರ ಅಪಾರ ಕೊಡುಗೆ ಇದೆ,” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದರು. ಬೆಂಗಳೂರು ನಮ್ಮ ಮೆಟ್ರ
Pm


Pm


ಬೆಂಗಳೂರು, 10 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬೆಂಗಳೂರು ನವ ಭಾರತ ನಿರ್ಮಿಸುವಲ್ಲಿ ಹಾಗೂ ಭಾರತವನ್ನು ಜಾಗತಿಕ ತಂತ್ರಜ್ಞಾನ ನಕ್ಷೆಯಲ್ಲಿ ಎತ್ತಿ ಹಿಡಿದ ನಗರ ಇದು. ಈ ಯಶಸ್ಸಿನ ಹಿಂದೆ ಬೆಂಗಳೂರಿನ ಜನರ ಅಪಾರ ಕೊಡುಗೆ ಇದೆ,” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದರು.

ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಹಾಗೂ ವಂದೇ ಭಾರತ್ ರೈಲುಗಳಿಗೆ ಚಾಲನೆ ಮತ್ತು ಮೆಟ್ರೋ ಮೂರನೇ ಹಂತದ ಕಾಮಗಾರಿಗೆ ಚಾಲನೆ ನೀಡಿದರು.

ಇಂದು ಮೂರು ವಂದೇ ಭಾರತ್ ರೈಲುಗಳು ಹಾಗೂ ಬೆಂಗಳೂರು ಮೆಟ್ರೋ ಹಳದಿ ಮಾರ್ಗ ರಾಷ್ಟ್ರಕ್ಕೆ ಸಮರ್ಪಿತವಾಗಿರುವುದನ್ನು ಘೋಷಿಸಿದರು.

“ಬೆಂಗಳೂರು–ಬೆಳಗಾವಿ ರೈಲು, ಬೆಳಗಾವಿಯ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳಿಗೆ ಹೊಸ ಶಕ್ತಿ ತುಂಬಲಿದೆ,” ಎಂದರು.

ಆಪರೇಷನ್ ಸಿಂಧೂರ್ ಉಲ್ಲೇಖ

“ಆಪರೇಷನ್ ಸಿಂಧೂರ್ ಯಶಸ್ಸಿನ ನಂತರ ನಾನು ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ. ಈ ಕಾರ್ಯಾಚರಣೆಯ ವಿಜಯ ನವ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿತು. ಇದರ ಹಿಂದಿನ ಶಕ್ತಿ, ನಮ್ಮ ಸ್ಥಳೀಯ ತಂತ್ರಜ್ಞಾನ ಹಾಗೂ ‘ಮೇಕ್ ಇನ್ ಇಂಡಿಯಾ’ ಉತ್ಸಾಹ. ಇದರಲ್ಲಿ ಕರ್ನಾಟಕದ ಪಾತ್ರ ಅಪಾರ,” ಎಂದು ಪ್ರಧಾನಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande