ರೈತರಿಗೆ ಮೂರು ದಿನಗಳ ಕಾಲ ತರಬೇತಿ ಕಾರ್ಯಕ್ರಮ
ಬೆಂಗಳೂರು, 09 ಆಗಸ್ಟ್ (ಹಿ.ಸ.) : ಆ್ಯಂಕರ್ : ಬೆಂಗಳೂರು ನಗರ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ಕೃಷಿ ವಿಕಾಸ ಯೋಜನೆಯಡಿ 2025-26ನೇ ಸಾಲಿಗೆ ರೈತ/ ರೈತ ಮಹಿಳೆಯರಿಗೆ ಹಣ್ಣು, ತರಕಾರಿ ಸಂಸ್ಕರಣೆ ಹಾಗೂ ಔಷದಿ ಗಿಡಮೂಲಿಕೆಗಳ ಉಪಯೋಗ ಹಾಗೂ ನೋವಿನ್ ಎಣ್ಣೆ ತಯಾರಿಕೆ ಕುರಿತು ದಿನಾಂಕ 11.08.2025
ರೈತರಿಗೆ ಮೂರು ದಿನಗಳ ಕಾಲ ತರಬೇತಿ ಕಾರ್ಯಕ್ರಮ


ಬೆಂಗಳೂರು, 09 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬೆಂಗಳೂರು ನಗರ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ಕೃಷಿ ವಿಕಾಸ ಯೋಜನೆಯಡಿ 2025-26ನೇ ಸಾಲಿಗೆ ರೈತ/ ರೈತ ಮಹಿಳೆಯರಿಗೆ ಹಣ್ಣು, ತರಕಾರಿ ಸಂಸ್ಕರಣೆ ಹಾಗೂ ಔಷದಿ ಗಿಡಮೂಲಿಕೆಗಳ ಉಪಯೋಗ ಹಾಗೂ ನೋವಿನ್ ಎಣ್ಣೆ ತಯಾರಿಕೆ ಕುರಿತು ದಿನಾಂಕ 11.08.2025 ರಿಂದ 13.08.2025 ರವರೆಗೆ ಮೂರು ದಿನಗಳ ಕಾಲ ತರಬೇತಿ ಕಾರ್ಯಕ್ರಮವನ್ನು ಆನೇಕಲ್ ತಾಲ್ಲೂಕಿನ ರಾಮಕೃಷ್ಣಪುರ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆರ್.ಕೆ.ಶಾಲೆಯಲ್ಲಿ ಆಯೋಜಿಸಲಾಗಿದೆ.

ತರಬೇತಿಗೆ ಆಸಕ್ತಿಯುಳ್ಳ ರೈತರು ದೂರವಾಣಿ: 6363695621 ಗೆ ಕರೆ ಮಾಡಿ ನೋಂದಾಯಿಸಿಕೊಂಡು ತರಬೇತಿಯ ಉಪಯೋಗವನ್ನು ಪಡೆದುಕೊಳ್ಳಬಹುದು. ತರಬೇತಿಗೆ ಹಾಜರಾಗುವ ರೈತರು ಕಡ್ಡಾಯವಾಗಿ ಎಫ್.ಐ.ಡಿ / ಆಧಾರ ಸಂಖ್ಯೆ ಹಾಗೂ ಮೋಬೈಲ್ ಸಂಖ್ಯೆ ತರಬೇಕೆಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande