ಗದಗ, 09 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಶ್ವ ಕಲ್ಯಾಣ (ರಿ) ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಇನರವ್ಹೇಲ್ ಕ್ಲಭ ಆಫ್ ಗದಗ ಮಿಡಟೌಯಿಂದ ವಿಶೇಷ ಮಕ್ಕಳೊಂದಿಗೆ ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಇನರವ್ಹೀಲ್ ಕ್ಲಭ ಆಫ್ ಗದಗ ಮಿಡಟೌನಿನ ಅಧ್ಯಕ್ಷೆ ಶ್ರೀಮತಿ ಗೀತಾ ಎಸ್. ಬಿಕ್ಷಾವತಿಮಠವರು ಮಾತನಾಡಿ, ಸಮಾಜದಲ್ಲಿ ಅವಕಾಶವಂಚಿತ ವಿಶೇಷ ಮಕ್ಕಳಿಗೆ ಸೂಕ್ತವಾದ ಅವಕಾಶಗಳನ್ನು ಕಲ್ಪಿಸಿ, ಅವರವರ ಸಾಮಥ್ರ್ಯಗೆ ತಕ್ಕಂತೆ ತರಬೇತಿ ನೀಡಿ, ಸಮಾಜದಲ್ಲಿ ಸ್ವಾವಲಂಬಿ ಜೀವನವನ್ನು ನಡೆಸುವ ಹಾಗೆ ಮಾಡಿ, ಅವರಲ್ಲಿ ಸೂಪ್ತವಾದ ಶಕ್ತಿಯನ್ನು ಹೊರತರುವ ಈ ಸೇವಾ ಕಾರ್ಯ ದೇವರು ಮೆಚ್ಚುವಂತಹದ್ದು, ಸಮಾಜದ ಮುಖ್ಯವಾಹಿನಿಗೆ ತರುತ್ತಿರುವ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯವಾಗಿದೆ. ವಿಶೇಷ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವೆಂದು ಸಂಕಲ್ಪದೊಂದಿಗೆ ಇಂದು ಎಲ್ಲ ವಿಶೇಷ ಮಕ್ಕಳಿಗೆ ರಕ್ಷೆಯನ್ನು ಕಟ್ಟಿ ನಾವು ಕೂಡಾ ಈ ಸೇವಾ ಕಾರ್ಯಕ್ಕೆ ಸಹಾಯ-ಸಹಕಾರ ನೀಡುವುದರ ಮೂಲಕ ಬೆನ್ನೆಲುಬಾಗಿ ನಿಲ್ಲುತ್ತೇವೆಂದು ಹೇಳಿದರು.
ಇನರವ್ಹೀಲ್ ಕ್ಲಬ್ ಆಫ್ ಗದಗ ಮಿಡಟೌನಿನ ಅಥಿತಿಗಳಾಗಿ ಕ್ಲಭಿನ ಎಡಿಟರ್ ಶ್ರೀ ಶೈಲಜಾ ಎಸ್. ಕವಲೂರ, ಪಾಸ್ಟ್ ಪ್ರೇಸಿಡೆಂಟ್ ಶ್ರೀಮತಿ ರೇಖಾ ವಿ. ಖಟವಟೆ, ಸದಸ್ಯೆ ಅಶ್ವಿನಿ ಎಸ್. ಮಾದಗುಂಡಿವರು ಮಾತನಾಡಿ, ಸಮಾಜ ನಮಗೆ ಏನು ಕೊಟ್ಟಿದೆ ಅನ್ನುವುದಕ್ಕಿಂತ, ನಾವು ಸಮಾಜಕ್ಕೆ ಏನು ಕೊಟ್ಟೀವಿ ಎಂಬುದು ಮುಖ್ಯ. ದೈವ ಸ್ವರೂಪಿಗಳಾದ ವಿಶೇಷ ಚೇತನ ಮಕ್ಕಳ ಪ್ರತಿಭೆಯನ್ನು ಸಮಾಜಕ್ಕೆ ತೋರಿಸುವುದರ ಮೂಲಕ ಮುಖ್ಯವಾಹಿನಿಗೆ ತರುವ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಿರುವ ವಿಶ್ವ ಕಲ್ಯಾಣ ಸಂಸ್ಥೆ ಸೇವಾ ಕಾರ್ಯ ಶ್ಲಾಘನೀವಾಗಿದೆ. ಪ್ರತ್ಯಕ್ಷ ದೇವರೇ ಈ ವಿಶೇಷ ಚೇತನ ಮಕ್ಕಳು ಹಾಗೂ ಇವರ ಸೇವೆ ಮಾಡುತ್ತಿರುವ ಸಿಬ್ಬಂದಿ ವರ್ಗದವರೂ ಕೂಡಾ ದೇವರೆ ಎಂದು ಹೇಳಿ, ಮನೆಯಲ್ಲಿ ಸಾಮಾನ್ಯ ಮಕ್ಕಳೊಬ್ಬರನ್ನೇ ಸಂಬಾಸಲಿಕ್ಕೆ ಆಗುವುದಿಲ್ಲಾ, ಈ ಎಲ್ಲಾ ವಿಶೇಷ ಮಕ್ಕಳನ್ನು ವೈಜ್ಞಾನಿಕವಾಗಿ ಶಿಕ್ಷಣ-ಆರೋಗ್ಯ-ಕೌಶಲ್ಯ ತರಬೇತಿ ಹಾಗೂ ಉದ್ಯೋಗವಕಾಶವನ್ನು ಕಲ್ಪಿಸುತ್ತಿರುವ ವಿಶ್ವ ಕಲ್ಯಾಣ ಸಂಸ್ಥೆಯು ವಿಶೇಷಚೇತನರಿಗೆ ಆಶಾಕಿರಣವಾಗಿದೆ, ಇಂದು ನಾವು ಎಲ್ಲ ವಿಶೇಷ ಮಕ್ಕಳಿಗೆ ರಕ್ಷೆಯನ್ನು ಕಟ್ಟಿದ್ದು ನಮ್ಮ ಸೌಭಾಗ್ಯವೆಂದು ಹೇಳಿ, ನಾವು ಈ ಸೇವಾ ಕಾರ್ಯ ನಿರಂತವಾಗಿ ಕ್ಲಬ್ ಮೂಲಕ ಹಾಗು ವೈಯಕ್ತಿಕವಾಗಿ ಎಲ್ಲ ರೀತಿಯ ಸಹಾಯ-ಸಹಕಾರ ನೀಡುವುದಾಗಿ ಹೇಳಿದರು.
ಸಂಸ್ಥೆಯ ಅಧ್ಯಕ್ಷ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಮಂಜುನಾಥ ಹದ್ದಣ್ಣವರವರ ಪ್ರಾಸ್ತವಿಕವಾಗಿ ಮಾತನಾಡಿ, ಸಂಸ್ಥೆಯ ಸೇವಾ ಕಾರ್ಯಗಳನ್ನು ತಿಳಿಸುತ್ತಾ, ಇಂದು ಇನರವ್ಹೀಲ್ ಕ್ಲಭ ಆಫ್ ಗದಗ ಮಿಡಟೌನವರು ವಿಶೇಷ ಮಕ್ಕಳೊಂದಿಗೆ ರಕ್ಷಾ ಬಂಧನವನ್ನು ಆಚರಿಸುವುದರ ಮೂಲಕ ಈಡೀ ಸಮಾಜಕ್ಕೆ ಆದರ್ಶವಾಗಿದ್ದಾರೆ. ಕ್ಲಬಿನ ಎಲ್ಲ ಸಹೋದರಿಯರು ವಿಶೇಷ ಮಕ್ಕಳಿಗೆ ರಕ್ಷೆಯನ್ನು ಕಟ್ಟಿ, ಆರತಿಯನ್ನು ಮಾಡಿ ಈ ಸೇವಾ ಕಾರ್ಯಕ್ಕೆ ನಾವು ಕೂಡಾ ಸಹಾಯ-ಸಹಕಾರ ಮಾಡುತ್ತೇವೆಂದು ಹೇಳಿದ್ದು, ನಿಜವಾಗಲೂ ನಮಗೆ ನೈತಿಕವಾಗಿ, ಆರ್ಥಿಕವಾಗಿ ಶಕ್ತಿಯನ್ನು ತುಂಬಿದ್ದಾರೆಂದು ಹೇಳಿದರು.
ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಎಲ್ಲ ವಿಶೇಷ ಮಕ್ಕಳೊಂದಿಗೆ ಕ್ಲಬಿನ ಎಲ್ಲರೂ ವಿಶೇಷ ಮಕ್ಕಳಿಗೆ ರಕ್ಷೆಯನ್ನು ಕಟ್ಟಿ, ಆರತಿ ಮಾಡಿ, ಸಿಹಿಯನ್ನು ತಿನ್ನಿಸುವುದರ ಮೂಲಕ ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ವಿಶೇಷ ಮಕ್ಕಳು ಕ್ಲಬಿನ ಅಧ್ಯಕ್ಷೆ ಶ್ರೀಮತಿ ಗೀತಾ ಎಸ್. ಬಿಕ್ಷಾವತಿಮಠವರನ್ನು ಶ್ಯಾಲ ಹೊದಿಸಿ, ಹಾರ ಹಾಕಿ, ನೆನಪಿನ ಕಾಣಿಕೆಯನ್ನು ನೀಡುವುದರ ಮೂಲಕ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಎಮ್‍ಎಸ್‍ಡಬ್ಲ್ಯ ವಿಭಾಗದ ಪ್ರಶಿಕ್ಷಣಾರ್ಥಿ ಕುಮಾರಿ ದೀಪ್ತಿ, ಶ್ರೀಮತಿ ಶಾಂತಮ್ಮಾ ಹೂಗಾರ, ವಿಶೇಷ ಮಕ್ಕಳು, ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು, ಕೊನೆಗೆ ಎಲ್ಲರಿಗೂ ರಕ್ಷೆಯನ್ನು ಕಟ್ಟಿ ಸಿಹಿ ತಿನ್ನಿಸಿದರು. ಆಗಮಿಸಿದೆಲ್ಲರೂ ವಿಶೇಷ ಮಕ್ಕಳಿಗೆ ಸಿಹಿಯನ್ನು ತಿನ್ನಿಸಿದ್ದು ತುಂಬಾ ವಿಶೇಷವಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / lalita MP