ನವದೆಹಲಿ, 09 ಆಗಸ್ಟ್ (ಹಿ.ಸ.) :
ಆ್ಯಂಕರ್ : ಹಬ್ಬದ ಋತುವಿನ ಪ್ರಯಾಣ ದಟ್ಟಣೆ ನಿಯಂತ್ರಣಕ್ಕಾಗಿ ಭಾರತೀಯ ರೈಲ್ವೆ ಹೊಸ ಪೈಲಟ್ ಯೋಜನೆ ‘ಹಬ್ಬದ ರೌಂಡ್ ಟ್ರಿಪ್ ಪ್ಯಾಕೇಜ್’ ಘೋಷಿಸಿದೆ. ಹೊಗುವ ಮತ್ತು ಹಿಂತಿರುಗುವ ಟಿಕೆಟ್‌ಗಳನ್ನು ಒಂದೇ ಸಮಯದಲ್ಲಿ ಕಾಯ್ದಿರಿಸಿದರೆ ಹಿಂತಿರುಗುವ ಟಿಕೆಟ್ ದರದಲ್ಲಿ 20% ರಿಯಾಯಿತಿ ಘೋಷಿಸಲಾಗಿದೆ.
ಯೋಜನೆ ಆಗಸ್ಟ್ 14ರಿಂದ ಜಾರಿಗೆ ಬರಲಿದ್ದು, ಹೊರಡವು ಪ್ರಯಾಣವನ್ನು ಅ.13-26ರ ನಡುವೆ ಹಾಗೂ ಹಿಂತಿರುಗುವ ಪ್ರಯಾಣವನ್ನು ನ.17-ಡಿ.1ರ ನಡುವೆ ಬುಕ್ ಮಾಡಬಹುದು. ದೃಢೀಕರಿಸಿದ ಟಿಕೆಟ್‌ಗಳಿಗೆ ಮಾತ್ರ ಅನ್ವಯಿಸುವ ಈ ರಿಯಾಯಿತಿ, ರದ್ದು/ಮಾರ್ಪಾಡು/ಮರುಪಾವತಿ ಇರುವುದಿಲ್ಲ. ಎರಡೂ ಟಿಕೆಟ್‌ಗಳನ್ನು ಒಂದೇ ಮಾಧ್ಯಮದ ಮೂಲಕ ಬುಕ್ ಮಾಡಬೇಕು.
ಫ್ಲೆಕ್ಸಿ ದರ ರೈಲುಗಳನ್ನು ಹೊರತುಪಡಿಸಿ ಎಲ್ಲಾ ತರಗತಿಗಳು ಹಾಗೂ ರೈಲುಗಳಲ್ಲಿ ಅನ್ವಯವಾಗುವ ಈ ಯೋಜನೆಯನ್ನು ಗರಿಷ್ಠ ಪ್ರಮಾಣದಲ್ಲಿ ಪ್ರಚಾರ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa