ವಿಜಯಪುರ, 09 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮತದಾರರ ಪಟ್ಟಿಯನ್ನು ಡಿಜಿಟಲ್ ಫಾರ್ಮೆಟ್‌ನಲ್ಲಿ ಕೊಡಿ ಎಂದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಒತ್ತಾಯ ಮಾಡಿದೆ ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಮತದಾರ ಪಟ್ಟಿಯ ಮಾಹಿತಿಯನ್ನು 45 ದಿನಗಳಲ್ಲಿ ಅಳಿಸಿ ಹಾಕಲಾಗಿದೆ.
ತರಾತುರಿಯಲ್ಲಿ ಯಾಕೆ ಡಿಲೀಟ್ ಮಾಡಲಾಗಿದೆ ಎಂದು ಪ್ರಶ್ನಿಸಿದರು.
ಡಿಜಿಟಲ್ ರೂಪದಲ್ಲಿ ಕೊಟ್ಟರೆ ನಕಲಿ ಕುರಿತು ಎಲ್ಲವೂ ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಾಗಾಗಿ ಡಿಜಿಟಲ್ ಫಾರ್ಮಾಟ್ ನಲ್ಲಿ ಮಾಹಿತಿ ಕೊಡುತ್ತಿಲ್ಲ. ಇನ್ನೂ ಮಹಾದೇವಪುರ ಒಂದು ಉದಾಹರಣೆ ಅಷ್ಟೇ. ಸೆಲ್ ಫಾರ್ಮೆಟ್ ನಲ್ಲಿ ಮತದಾರ ಮಾಹಿತಿಯನ್ನು ಕೊಟ್ಟರೆ 524 ಲೋಕ ಸಭಾ ಕ್ಷೇತ್ರಗಳ ಸಂಪೂರ್ಣ ಮಾಹಿತಿಯು ಸಿಗಲಿದೆ. ಇದರಿಂದ ಎಲ್ಲೆಲ್ಲಿ ಅಕ್ರಮವಾಗಿದೆ ಎಂದು ತಿಳಿದು ಬರುತ್ತದೆ. ಪಾರದರ್ಶಕವಾಗಿ ಚುನಾವಣೆ ನಡೆದಿದ್ದರೆ ಡಿಜಿಟಲ್ ಫಾರ್ಮೆಟ್ ನಲ್ಲಿ ಕೊಡಲು ಯಾಕೆ ಹಿಂಜರಿಕೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande