ಭಾರತದ ರಕ್ಷಣಾ ಉತ್ಪಾದನೆಯಲ್ಲಿ ಗರಿಷ್ಠ ದಾಖಲೆ
ನವದೆಹಲಿ, 09 ಆಗಸ್ಟ್ (ಹಿ.ಸ.) : ಆ್ಯಂಕರ್ : 2024-25ನೇ ಹಣಕಾಸು ವರ್ಷದಲ್ಲಿ ಭಾರತದ ವಾರ್ಷಿಕ ರಕ್ಷಣಾ ಉತ್ಪಾದನೆ ಇತಿಹಾಸದಲ್ಲೇ ಅತ್ಯಧಿಕ ಮಟ್ಟ ತಲುಪಿದ್ದು, ₹1,50,590 ಕೋಟಿಗಳ ಗರಿಷ್ಠ ಸಾಧನೆಯಾಗಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ದಾಖಲಾಗಿದ್ದ ₹1.27 ಲಕ್ಷ ಕೋಟಿಗಳ ಉತ್ಪಾದನೆಗೆ ಹೋಲಿಸಿದರೆ ಶೇ
MoD


ನವದೆಹಲಿ, 09 ಆಗಸ್ಟ್ (ಹಿ.ಸ.) :

ಆ್ಯಂಕರ್ : 2024-25ನೇ ಹಣಕಾಸು ವರ್ಷದಲ್ಲಿ ಭಾರತದ ವಾರ್ಷಿಕ ರಕ್ಷಣಾ ಉತ್ಪಾದನೆ ಇತಿಹಾಸದಲ್ಲೇ ಅತ್ಯಧಿಕ ಮಟ್ಟ ತಲುಪಿದ್ದು, ₹1,50,590 ಕೋಟಿಗಳ ಗರಿಷ್ಠ ಸಾಧನೆಯಾಗಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ದಾಖಲಾಗಿದ್ದ ₹1.27 ಲಕ್ಷ ಕೋಟಿಗಳ ಉತ್ಪಾದನೆಗೆ ಹೋಲಿಸಿದರೆ ಶೇ.18ರಷ್ಟು ಹೆಚ್ಚಾಗಿದೆ. 2019-20ನೇ ಹಣಕಾಸು ವರ್ಷದ ₹79,071 ಕೋಟಿಗಳ ಉತ್ಪಾದನೆಯೊಂದಿಗೆ ಹೋಲಿಸಿದರೆ, ಇದು ಶೇ.90ರಷ್ಟು ಏರಿಕೆಯಾಗಿದೆ.

ರಕ್ಷಣಾ ಸಚಿವಾಲಯದ ಮಾಹಿತಿ ಪ್ರಕಾರ, ಈ ಸಾಧನೆಯಲ್ಲಿ ಸಾರ್ವಜನಿಕ ವಲಯದ ಉದ್ಯಮಗಳು ಹಾಗೂ ಇತರ ಸರ್ಕಾರಿ ಸಂಸ್ಥೆಗಳು ಒಟ್ಟಾರೆ ಶೇ.77ರಷ್ಟು ಪಾಲು ವಹಿಸಿದ್ದರೆ, ಖಾಸಗಿ ವಲಯದ ಕೊಡುಗೆ ಶೇ.23 ಆಗಿದೆ. 2023-24ರಲ್ಲಿ ಶೇ.21 ಇದ್ದ ಖಾಸಗಿ ವಲಯದ ಪಾಲು ಈ ವರ್ಷ ಶೇ.23ಕ್ಕೆ ಏರಿಕೆಯಾಗಿದೆ.

ದೂರದೃಷ್ಟಿಯ ನೀತಿ ಸುಧಾರಣೆಗಳು, ವ್ಯವಹಾರ ಮಾಡುವ ಸುಲಭತೆ ಹಾಗೂ ದೇಶೀಕರಣದತ್ತದ ಕಾರ್ಯತಂತ್ರದ ಗಮನದಿಂದಾಗಿ, ಕಳೆದ ದಶಕದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯ ಎರಡೂ ನಿರಂತರ ಬೆಳವಣಿಗೆ ಸಾಧಿಸಿವೆ. 2024-25ರಲ್ಲಿ ಸಾರ್ವಜನಿಕ ವಲಯದ ಉದ್ಯಮಗಳು ಉತ್ಪಾದನೆ ಶೇ.16 ಹಾಗೂ ಖಾಸಗಿ ವಲಯದ ಉತ್ಪಾದನೆ ಶೇ.28ರಷ್ಟು ಹೆಚ್ಚಳ ಕಂಡಿದೆ.

ರಕ್ಷಣಾ ಉತ್ಪಾದನೆಯಲ್ಲಿ ದಾಖಲೆಯ ಈ ಸಾಧನೆ, ಆಮದು ಮೇಲಿನ ಅವಲಂಬನೆ ಕಡಿಮೆ ಮಾಡುವುದರ ಜೊತೆಗೆ ದೇಶದ ಅಗತ್ಯಗಳನ್ನು ಪೂರೈಸುವ ಮತ್ತು ರಫ್ತು ಸಾಮರ್ಥ್ಯವನ್ನು ವಿಸ್ತರಿಸುವ ದಿಕ್ಕಿನಲ್ಲಿ ಮಹತ್ತರ ಹೆಜ್ಜೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande