ಆಂಧ್ರದ ಹೊಳಗುಂದ : ಅಣ್ಣ ತಮ್ಮ ಸಾವು
ಹೊಳಗುಂದ, ಆಂದ್ರಪ್ರದೇಶ, 09 ಆಗಸ್ಟ್ (ಹಿ.ಸ.) : ಆ್ಯಂಕರ್ : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ಹೊಳಗುಂದ ಗ್ರಾಮದಲ್ಲಿ ಸಹೋದರರಿಬ್ಬರು ಶನಿವಾರ ನಸುಕಿನಲ್ಲಿ ಕೇವಲ ನಾಲ್ಕು ತಾಸುಗಳ ಅಂತರದಲ್ಲಿ ಸಹಜವಾಗಿ ಮೃತಪಟ್ಟು ಅಣ್ಣ ತಮ್ಮನ ಆತ್ಮೀಯ ಸಂಬಂಧವನ್ನು ಮರಣದಲ್ಲೂ ತೋರಿ ಅನೇಕರಿಗ ಅಚ್ಚರಿ
ಆಂಧ್ರದ ಹೊಳಗುಂದ : ಅಣ್ಣ ತಮ್ಮ ಸಾವು


ಆಂಧ್ರದ ಹೊಳಗುಂದ : ಅಣ್ಣ ತಮ್ಮ ಸಾವು


ಹೊಳಗುಂದ, ಆಂದ್ರಪ್ರದೇಶ, 09 ಆಗಸ್ಟ್ (ಹಿ.ಸ.) :

ಆ್ಯಂಕರ್ : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ಹೊಳಗುಂದ ಗ್ರಾಮದಲ್ಲಿ ಸಹೋದರರಿಬ್ಬರು ಶನಿವಾರ ನಸುಕಿನಲ್ಲಿ ಕೇವಲ ನಾಲ್ಕು ತಾಸುಗಳ ಅಂತರದಲ್ಲಿ ಸಹಜವಾಗಿ ಮೃತಪಟ್ಟು ಅಣ್ಣ ತಮ್ಮನ ಆತ್ಮೀಯ ಸಂಬಂಧವನ್ನು ಮರಣದಲ್ಲೂ ತೋರಿ ಅನೇಕರಿಗ ಅಚ್ಚರಿ ಮೂಡಿಸಿದ್ದಾರೆ.

ಹೊಳಗುಂದಿ ಜಮಾಪುರದ ಭದ್ರಪ್ಪನವರ ಚನ್ನಪ್ಪ (80) ಅವರು ಶನಿವಾರ ನಸುಕಿನ 12 ಗಂಟೆಯ ನಂತರ ಮೃತಪಟ್ಟಿದ್ದು, ಇವರ ಸಹೋದರ ಹೊಳಗುಂದಿ ಜಮಾಪುರದ ಭದ್ರಗೌಡ (ಭದ್ರಪ್ಪ) (77) ನಿಧನರಾಗಿದ್ದಾರೆ. ಇಬ್ಬರದ್ದೂ ಸಹಜವಾದ ಸಾವು.

ಚನ್ನಪ್ಪ ಅವರಿಗೆ ಪತ್ನಿ, ನಾಲ್ಕು ಹೆಣ್ಣುಮಕ್ಕಳು, ಅಳಿಯಂದಿರರು, ಒಬ್ಬ ಮಗ- ಸೊಸೆಯನ್ನು, ಮೊಮ್ಮಕ್ಕಳನ್ನ, ಭದ್ರಗೌಡ ಅವರಿಗೆ ಪತ್ನಿ, ಮೂವರು ಹೆಣ್ಣುಮಕ್ಕಳು - ಅಳಿಯಂದಿರರು, ಒಬ್ಬ ಮಗ ಮತ್ತು ಸೊಸೆಯನ್ನು, ಮೊಮ್ಮಕ್ಕಳನ್ನು ಇದ್ದಾರೆ.

ಹೊಳಗುಂದಲ್ಲಿ ಶನಿವಾರ ಸಂಜೆ ಸಹೋದರರ ಅಂತ್ಯಕ್ರಿಯೆಯನ್ನು ಗ್ರಾಮಸ್ಥರು ಮತ್ತು ಬಂಧುವರ್ಗದ ಸಮ್ಮುಖದಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಗುರು ಹಿರಿಯರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಸಹೋದರರ ಅಂತ್ಯಕ್ರಿಯೆಗೆ ಅಗಮಿಸಿದ್ದ ಪ್ರತಿಯೊಬ್ಬರೂ, ಸಹೋದರರ ಆತ್ಮೀಯತೆ, ಬಾಲ್ಯ ಮತ್ತು ಬೆಳವಣಿಗೆಗಳ ಕುರಿತು ಮಾತನಾಡಿದ್ದು ವಿಶೇಷವಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande