ಶ್ವಾನ ರಕ್ಷಿಸಿದ ಅಗ್ನಿ ಶಾಮಕ ಸಿಬ್ಬಂದಿ
ವಿಜಯಪುರ, 09 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಾವಿಯಲ್ಲಿ ಬಿದ್ದಿದ್ದ ಶ್ವಾನವನ್ನು ರಕ್ಷಣೆ ಮಾಡಲಾಯಿತು. ಬಾಗಲಕೋಟ ಜಿಲ್ಲೆಯ ಇಳಕಲ್ ಪಟ್ಟಣದ ಗೊರಬಾಳ ಗ್ರಾಮದ ರಸ್ತೆಯಲ್ಲಿರುವ ಚೆನ್ನಪ್ಪ ಕೌದಿ ಎಂಬುವರ ತೋಟದ ಬಾವಿಯಲ್ಲಿ ಶ್ವಾನ ಬಿದ್ದಿತ್ತು.‌ ಇದನ್ನು ನೋಡಿದ ಸ್ಥಳೀಯರು ಬಸನಗೌಡ ಪಾಟೀಲ್ ಅಗ್ನಿಶಾಮಕ ಸ
ಶ್ವಾನ


ವಿಜಯಪುರ, 09 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಾವಿಯಲ್ಲಿ ಬಿದ್ದಿದ್ದ ಶ್ವಾನವನ್ನು ರಕ್ಷಣೆ ಮಾಡಲಾಯಿತು. ಬಾಗಲಕೋಟ ಜಿಲ್ಲೆಯ ಇಳಕಲ್ ಪಟ್ಟಣದ ಗೊರಬಾಳ ಗ್ರಾಮದ ರಸ್ತೆಯಲ್ಲಿರುವ ಚೆನ್ನಪ್ಪ ಕೌದಿ ಎಂಬುವರ ತೋಟದ ಬಾವಿಯಲ್ಲಿ ಶ್ವಾನ ಬಿದ್ದಿತ್ತು.‌

ಇದನ್ನು ನೋಡಿದ ಸ್ಥಳೀಯರು ಬಸನಗೌಡ ಪಾಟೀಲ್ ಅಗ್ನಿಶಾಮಕ ಸಿಬ್ಬಂದಿಯವರಿಗೆ ವಿಷಯವನ್ನು ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಯರು ತಮ್ಮ ಜೀವದ ಹಂಗು ತೊರೆದು ನಾಯಿಯನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ನಂತರ ನಾಯಿಯನ್ನು ಮಾಲೀಕ ಮಹಾಂತೇಶ ಕರ್ಜಗಿಗೆ ಹಸ್ತಾಂತರ ಮಾಡಿದರು. ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿ ಸಂಗಪ್ಪ, ಸಿಬ್ಬಂದಿಯವರಾದ ಮಾನಸಿಂಗ ಲಮಾಣಿ, ಪ್ರಭುದೇವ್ ಬೆಳ್ಳಿಹಾಳ, ಜಗದೀಶ್ ಗಿರಡ್ಡಿ, ಮಮ್ಮದರಫೀಕ್ ವಾಲಿಕಾರ್, ಅಶೋಕ ಕಾಮ, ಸಂತೋಷ್ ಕೆಲೂರು, ರವಿಚಂದ್ರ ಇದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande