ಧರಾಲಿ ದುರಂತ : ಮುಂದುವರೆದ ರಕ್ಷಣಾ ಕಾರ್ಯಾಚರಣೆ
ಉತ್ತರಕಾಶಿ, 09 ಆಗಸ್ಟ್ (ಹಿ.ಸ.) : ಆ್ಯಂಕರ್ : ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿ ಪ್ರದೇಶದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯಾಚರಣೆ ಶನಿವಾರ ಐದನೇ ದಿನವೂ ಮುಂದುವರಿದಿದೆ. ಇಂದು ಬೆಳಿಗ್ಗೆ ವಾಯುಸೇನೆ ಹಾಗೂ ವಿಪತ್ತು ನಿರ್ವಹಣಾ ಪಡೆಯ ಸಹಯೋಗದಿಂದ 74 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
Rescue


ಉತ್ತರಕಾಶಿ, 09 ಆಗಸ್ಟ್ (ಹಿ.ಸ.) :

ಆ್ಯಂಕರ್ : ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿ ಪ್ರದೇಶದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯಾಚರಣೆ ಶನಿವಾರ ಐದನೇ ದಿನವೂ ಮುಂದುವರಿದಿದೆ.

ಇಂದು ಬೆಳಿಗ್ಗೆ ವಾಯುಸೇನೆ ಹಾಗೂ ವಿಪತ್ತು ನಿರ್ವಹಣಾ ಪಡೆಯ ಸಹಯೋಗದಿಂದ 74 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಹರ್ಷಿಲ್‌ನಿಂದ ಮಟ್ಲಿಗೆ 51 ಪ್ರಯಾಣಿಕರು ಮತ್ತು ಮಟ್ಲಿಯಿಂದ ಹರ್ಷಿಲ್‌ಗೆ 23 ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು.

ರಕ್ಷಣಾ ಕಾರ್ಯದಲ್ಲಿ ಸೇನೆ, ಯುಸಿಎಡಿಎ ಹೆಲಿಕಾಪ್ಟರ್‌ಗಳು, ಚಿನೂಕ್ ಹಾಗೂ ಚೀತಾ ಹೆಲಿಕಾಪ್ಟರ್‌ಗಳು ಭಾಗವಹಿಸಿವೆ. ಸೇನಾ ಪಡೆ ಲಿಮ್ಚಿಗಢದಲ್ಲಿ ಬೈಲಿ ಸೇತುವೆ ನಿರ್ಮಾಣವನ್ನು ಮುಂದುವರಿಸಿದ್ದು, ಚಿನೂಕ್ ಮೂಲಕ ಹರ್ಷಿಲ್‌ಗೆ ಜನರೇಟರ್‌ಗಳು ಹಾಗೂ ಅಗತ್ಯ ಉಪಕರಣಗಳನ್ನು ತಲುಪಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆಗೆ ಬೇಕಾದ ಲಾಜಿಸ್ಟಿಕಲ್ ಬೆಂಬಲವನ್ನು ಒದಗಿಸಲು ಹಲವಾರು ಯಂತ್ರೋಪಕರಣಗಳು ಮತ್ತು ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande