ಲೀಗ್ಸ್ ಕಪ್ 2025 : ಗಾಯಗೊಂಡ ಮೆಸ್ಸಿ, ತಂಡದಿಂದ ಹೊರಗೆ
ಮಿಯಾಮಿ, 06 ಆಗಸ್ಟ್ (ಹಿ.ಸ.) : ಆ್ಯಂಕರ್ : 2025ರ ಲೀಗ್ಸ್ ಕಪ್‌ನ ಮಹತ್ವದ ಗುಂಪು ಹಂತದ ಪಂದ್ಯದಲ್ಲಿ ಇಂಟರ್ ಮಿಯಾಮಿ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಗಾಯದ ಕಾರಣದಿಂದ ಪುಮಾಸ್ ಉನಮ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ತರಬೇತುದಾರ ಜೇವಿಯರ್ ಮ
Messi


ಮಿಯಾಮಿ, 06 ಆಗಸ್ಟ್ (ಹಿ.ಸ.) :

ಆ್ಯಂಕರ್ : 2025ರ ಲೀಗ್ಸ್ ಕಪ್‌ನ ಮಹತ್ವದ ಗುಂಪು ಹಂತದ ಪಂದ್ಯದಲ್ಲಿ ಇಂಟರ್ ಮಿಯಾಮಿ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಗಾಯದ ಕಾರಣದಿಂದ ಪುಮಾಸ್ ಉನಮ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ತರಬೇತುದಾರ ಜೇವಿಯರ್ ಮಸ್ಚೆರಾನೊ ದೃಢಪಡಿಸಿದ್ದಾರೆ.

ಕಳೆದ ಶನಿವಾರ ನೆಕಾಕ್ಸಾ ವಿರುದ್ಧದ ಪಂದ್ಯದಲ್ಲಿ ಬಲ ತೊಡೆಯ ಮೇಲ್ಭಾಗದಲ್ಲಿ ಸಣ್ಣ ಸ್ನಾಯು ಗಾಯವಾದ ಮೆಸ್ಸಿ, ಈ ಗಾಯದಿಂದಾಗಿ ಗುರುವಾರದ ನಿರ್ಣಾಯಕ ಪಂದ್ಯಕ್ಕೆ ಲಭ್ಯವಿಲ್ಲ. “ಮೆಸ್ಸಿ ಸಾಮಾನ್ಯವಾಗಿ ಬೇಗನೆ ಚೇತರಿಸಿಕೊಳ್ಳುತ್ತಾರೆ, ಆದರೆ ಈ ಪಂದ್ಯಕ್ಕೆ ಅವರು ಆಟವಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ,” ಎಂದು ಮಸ್ಚೆರಾನೊ ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande