ಗದಗ, 05 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣವು ಐತಿಹಾಸಿಕವಾಗಿ ಪರಿಶುದ್ಧ ಹತ್ತಿ ನೂಲಿನಿಂದ ತಯಾರಸಿದ “ಪಟ್ಟೆದ ಅಂಚು ಸೀರೆ”ಗಳ ಉತ್ಪಾದನೆಗೆ ಪ್ರಸಿದ್ಧಿ ಪಡೆದಿರುತ್ತದೆ. ಈ “ಪಟ್ಟೆದ ಅಂಚು ಸೀರೆ”ಗೆ 2025ರಲ್ಲಿ ಭಾರತ ಸರ್ಕಾರದಿಂದ “ಭೌಗೋಳಿಕ ಹಕ್ಕು ಸಾಮ್ಯ” ಮಾನ್ಯತೆ ನೀಡಲಾಗಿರುತ್ತದೆ.
ಪ್ರಸ್ತುತ ಗಜೇಂದ್ರಗಡ ಪಟ್ಟಣದಲ್ಲಿ ಸುಮಾರು 400 ಕೈಮಗ್ಗಗಳು ಕಾರ್ಯನಿರ್ವಹಿಸುತ್ತಿವೆ, ಇದರಲ್ಲಿ ಸುಮಾರು 200 ಕೈಮಗ್ಗಗಳು “ಪಟ್ಟೆದ ಅಂಚು ಸೀರೆ” ಗಳ ಉತ್ಪಾದನೆ ಮಾಡುತ್ತಿವೆ.
ತೇಜಪ್ಪ ವಿ ಚಿನ್ನೂರ ಇವರು ಸುಮಾರು 40 ವರ್ಷಗಳಿಂದ ಕೈಮಗ್ಗ ನೇಕಾರಿಕೆ ವೃತ್ತಿಯಲ್ಲಿ ತೊಡಗಿರುತ್ತಾರೆ. ಇವರು ದಿ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘ ನಿ. ಗಜೇಂದ್ರಗಡ ಸಂಘದಿಂದ ಕಚ್ಚಾಮಾಲು ಪಡೆದು ನಿಯಮಿತವಾಗಿ “ಪಟ್ಟೆದ ಅಂಚಿನ ಸೀರೆ“ ಗಳನ್ನು ಉತ್ಪಾದಿಸುತ್ತಿದ್ದಾರೆ.
ಈ ನೇಕಾರರು ಪ್ರಸ್ತುತ “ಪಟ್ಟದ ಅಂಚು ಸೀರೆ”ಯ ತಯಾರಿಕೆಯಲ್ಲಿ ಉಪಯೋಗಿಸುವ ನೈಸರ್ಗಿಕ ಅಂಟಿನಿಂದ ತಯಾರಿಸಿದ ವಾರ್ಫಿನ ಮೇಲೆ ಕೊಂಡಿ ತಂತ್ರಜ್ಞಾನ ಹಾಗೂ ಬುಟ್ಟಾ ತಿರುಕಿ ಮಾಡಕೊಂಡು “ಸಿಂಧೂರ ಚೆಕ್ಸ ಸೀರೆ”ಯನ್ನು ತಯಾರಿಸಿರುತ್ತಾರೆ.
“ಸಿಂಧೂರ ಚೆಕ್ಸ ಸೀರೆ”ಗೆ 2025-26ನೇ ಸಾಲಿನ ಹತ್ತಿ ವಿಭಾಗದಲ್ಲಿ ರಾಜ್ಯ ಮಟ್ಟದ ಕೈಮಗ್ಗ ನೇಕಾರರ ಪ್ರಶಸ್ತಿ ದೊರೆತಿರುತ್ತದೆ. ಸದರಿ ನೇಕಾರರಿಗೆ ದಿನಾಂಕ:07-08-2025ರಂದು ರಾಜ್ಯ ಸರ್ಕಾರಿ ನೌಕರರ ಭವನ ಕಬ್ಬನ್ ಪಾರ್ಕ ಬೆಂಗಳೂರನಲ್ಲಿ ಜರುಗುವ 11 ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ರೂ.20,000/-ಗಳ ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಗುವುದು. ಹಾಗೂ ಕೇಂದ್ರ ಸರ್ಕಾರದಿಂದ ಇವರಿಗೆ 60ವರ್ಷ ಆದ ನಂತರದಿಂದ ಅಂತ್ಯ ಕಾಲದವರೆಗೆ ಮಾಸಿಕ ರೂ.8000/-ಗಳ ವೃದ್ಯಾಪ್ತ ವೇತನ ನೀಡಲಾಗುವುದು.
ಸಿಂಧೂರ ಚೆಕ್ಸ ಸೀರೆಯ ವೈಶಿಷ್ಟ್ಯತೆ : ಒಂದು ಬದಿಯ ಸೆರಗನ್ನು ಘನ ಸೆರಗು ಮಾಡುವ ಸಲುವಾಗಿ ಎಳೆಗಳನ್ನು ಕೈಯಿಂದ ಕೆಚ್ಚಿ ವಾರ್ಪನ್ನು ಸಿದ್ದಪಡಿಸಿಕೊಂಡು, ಸಿದ್ಧಪಡಿಸಿದ ಘನ ಸೆರಗಿನಲ್ಲಿ ಸಾಂಪ್ರದಾಯಕ ಕೊಂಡಿ ತಂತ್ರಜ್ಞಾನ ಉಪಯೋಗಿಸಿ ಪಾರಂಪರಿಕ ವಿನ್ಯಾಸಗಳನ್ನು ಸೃಷ್ಠಿಸಲಾಗಿದೆ. ಹಾಗೂ ಮಾತೃ ಭಾಷೆ “ಕನ್ನಡ” ಎಂಬ ಅಕ್ಷರಗಳನ್ನು ಬುಟ್ಟಾ ತಿರುಕಿ ಮಾಡಕೊಂಡು ನೇಯಲಾಗಿದೆ.
ಇನ್ನೊಂದು ಬದಿಯ ಸೆರಗಿನಲ್ಲಿ ಇತ್ತೀಚೆಗೆ ಭಾರತ ದೇಶವು ನಡೆಸಿದ “ಆಪರೇಷನ್ ಸಿಂಧೂರ್” ಕಾರ್ಯಚರಣೆಯ ಹೆಮ್ಮೆಯ ಪ್ರತೀಕವಾಗಿ ಅಕ್ಷರಗಳನ್ನು ಬುಟ್ಟಾ ತಿರುಕಿ ಮಾಡಕೊಂಡು, ಹಾಗೂ ನೀಲಿ ಮತ್ತು ತ್ರಿವರ್ಣಗಳ ಯುದ್ಧ ವಿಮಾನಗಳನ್ನು ಕೊಂಡಿ ತಂತ್ರಜ್ಞಾನ ಉಪಯೋಗಿಸಿ ನೇಯಲಾಗಿದೆ. ಮುಂದುವರೆದು ವಡ್ಡಲದಲ್ಲಿ ಕೊಂಡಿ ತಂತ್ರಜ್ಞಾನ ಉಪಯೋಗಿಸಿಕೊಂಡು ಕಡಲ ಅಲೆಗಳ ಮಾದರಿ ವಿನ್ಯಾಸಗಳನ್ನು ನೇಯಲಾಗಿದೆ.
ಕೈಮಗ್ಗ ನೇಕಾರಿಕೆಯ ಉನ್ನತ ಮಟ್ಟದ
ನೈಪುಣ್ಯತೆ ಹೊಂದಿದ ತೇಜಪ್ಪ ವಿ ಚಿನ್ನೂರ ಸಾ: ಗಜೇಂದ್ರಗಡ ಇವರು ಏಕಾಗ್ರತೆಯಿಂದ ಸತತ 10 ದಿನಗಳ ಕಾಲ ಶ್ರಮವಹಿಸಿ ಈ ಉತ್ಪನ್ನವನ್ನು ತಯಾರಿಸಿರುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / lalita MP