ಹಾಲಿವುಡ್ ನಟಿ ಲೋನಿ ಆಂಡರ್ಸನ್ ನಿಧನ
ಲಾಸ್ ಏಂಜಲೀಸ್, 04 ಆಗಸ್ಟ್ (ಹಿ.ಸ.) : ಆ್ಯಂಕರ್ : ಪ್ರಸಿದ್ಧ ಹಾಲಿವುಡ್ ನಟಿ ಲೋನಿ ಆಂಡರ್ಸನ್ (79) ದೀರ್ಘಕಾಲದ ಅನಾರೋಗ್ಯದಿಂದಾಗಿ ಲಾಸ್ ಏಂಜಲೀಸ್‌ನ ಆಸ್ಪತ್ರೆಯಲ್ಲಿ ಇಂದು ನಿಧನರಾದರು. 1970–80ರ ದಶಕದಲ್ಲಿ WKRP in Cincinnati ನಿಂದ ಪ್ರಸಿದ್ಧಿ ಪಡೆದ ಅವರು, ಟಿವಿ ಮತ್ತು ಚಿತ್ರರಂಗದಲ್ಲಿ ನಾಲ್ಕ
Loni


ಲಾಸ್ ಏಂಜಲೀಸ್, 04 ಆಗಸ್ಟ್ (ಹಿ.ಸ.) :

ಆ್ಯಂಕರ್ : ಪ್ರಸಿದ್ಧ ಹಾಲಿವುಡ್ ನಟಿ ಲೋನಿ ಆಂಡರ್ಸನ್ (79) ದೀರ್ಘಕಾಲದ ಅನಾರೋಗ್ಯದಿಂದಾಗಿ ಲಾಸ್ ಏಂಜಲೀಸ್‌ನ ಆಸ್ಪತ್ರೆಯಲ್ಲಿ ಇಂದು ನಿಧನರಾದರು. 1970–80ರ ದಶಕದಲ್ಲಿ WKRP in Cincinnati ನಿಂದ ಪ್ರಸಿದ್ಧಿ ಪಡೆದ ಅವರು, ಟಿವಿ ಮತ್ತು ಚಿತ್ರರಂಗದಲ್ಲಿ ನಾಲ್ಕು ದಶಕಗಳ ಕಾಲ ಚಟುವಟಿಕೆಯಲ್ಲಿ ತೊಡಗಿದ್ದರು.

S.W.A.T., ತ್ರೀಸ್ ಕಂಪನಿ, ದಿ ಲವ್ ಬೋಟ್, ದಿ ಇನ್‌ಕ್ರೆಡಿಬಲ್ ಹಲ್ಕ್ ಮುಂತಾದ ಅನೇಕ ಟಿವಿ ಧಾರಾವಾಹಿಗಳಲ್ಲಿ ಅವರು ಬಣ್ಣ ಹಚ್ಚಿದ್ದರು. ನಟ ಬರ್ಟ್ ರೆನಾಲ್ಡ್ಸ್ ಅವರೊಂದಿಗೆ ಅವರ ವೈವಾಹಿಕ ಜೀವನವೂ ಜನಪ್ರಿಯವಾಗಿತ್ತು.

ಆಂಡರ್ಸನ್ ತಮ್ಮ ಪತಿ ಬಾಬ್ ಫ್ಲಿಕ್, ಮಕ್ಕಳಾದ ಡೀದ್ರಾ, ಕ್ವಿಂಟನ್, ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಕುಟುಂಬದ ಮಾಹಿತಿ ಪ್ರಕಾರ, ಹಾಲಿವುಡ್ ಫಾರೆವರ್ ಸ್ಮಶಾನದಲ್ಲಿ ಖಾಸಗಿ ಪ್ರಾರ್ಥನಾ ಸಮಾರಂಭ ನಡೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande