ಟೋಕಿಯೊದಲ್ಲಿ ಜಪಾನ್‌ನ 16 ಪ್ರಾಂತ್ಯಗಳ ಗವರ್ನರ್‌ಗಳೊಂದಿಗೆ ಪ್ರಧಾನಿ ಮೋದಿ ಮಾತುಕತೆ
ಟೋಕಿಯೋ, 30 ಆಗಸ್ಟ್ (ಹಿ.ಸ.) : ಆ್ಯಂಕರ್ : ಜಪಾನ್‌ ಪ್ರವಾಸದ ಕೊನೆಯ ದಿನ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಟೋಕಿಯೊದಲ್ಲಿ ಜಪಾನ್‌ನ 16 ಪ್ರಾಂತ್ಯಗಳ ಗವರ್ನರ್‌ಗಳೊಂದಿಗೆ ಸಂವಾದ ನಡೆಸಿದರು. ರಾಜ್ಯ-ಪ್ರಾಂತ್ಯ ಸಹಕಾರವು ಭಾರತ-ಜಪಾನ್ ಸ್ನೇಹದ ಪ್ರಮುಖ ಆಧಾರಸ್ತಂಭವಾಗಿದೆ ಎಂದು ಹೇಳಿದ್ದಾರೆ. ಮೋದ
Pm


ಟೋಕಿಯೋ, 30 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜಪಾನ್‌ ಪ್ರವಾಸದ ಕೊನೆಯ ದಿನ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಟೋಕಿಯೊದಲ್ಲಿ ಜಪಾನ್‌ನ 16 ಪ್ರಾಂತ್ಯಗಳ ಗವರ್ನರ್‌ಗಳೊಂದಿಗೆ ಸಂವಾದ ನಡೆಸಿದರು.

ರಾಜ್ಯ-ಪ್ರಾಂತ್ಯ ಸಹಕಾರವು ಭಾರತ-ಜಪಾನ್ ಸ್ನೇಹದ ಪ್ರಮುಖ ಆಧಾರಸ್ತಂಭವಾಗಿದೆ ಎಂದು ಹೇಳಿದ್ದಾರೆ.

ಮೋದಿ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತು ಚಿತ್ರ ಹಾಗೂ ಸಂದೇಶ ಹಂಚಿಕೊಂಡಿದ್ದು, “ವ್ಯಾಪಾರ, ನಾವೀನ್ಯತೆ, ಉದ್ಯಮಶೀಲತೆ, ಸ್ಟಾರ್ಟ್‌ಅಪ್‌ಗಳು, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರಕ್ಕೆ ಅಪಾರ ಅವಕಾಶಗಳಿವೆ” ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ನಡೆದ 15ನೇ ಭಾರತ-ಜಪಾನ್ ಶೃಂಗಸಭೆಯಲ್ಲಿ ಆರ್ಥಿಕ, ರಕ್ಷಣಾ, ಇಂಧನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸಲು ಭಾರತ ಮತ್ತು ಜಪಾನ್ ನಾಯಕರು ಒಪ್ಪಿಕೊಂಡಿದ್ದರು. ಮುಂದಿನ ದಶಕದಲ್ಲಿ ಭಾರತದಲ್ಲಿ ಜಪಾನಿನ ಖಾಸಗಿ ಹೂಡಿಕೆಯನ್ನು ವರ್ಷಕ್ಕೆ ಸುಮಾರು 6.8 ಬಿಲಿಯನ್ ಡಾಲರ್‌ಗಳಿಗೆ ಹೆಚ್ಚಿಸುವ ಗುರಿ ನಿಗದಿಯಾಗಿದೆ.

ಅದೇ ರೀತಿ, ಮುಂದಿನ ಐದು ವರ್ಷಗಳಲ್ಲಿ ಕಾರ್ಮಿಕ ಮತ್ತು ವಿದ್ಯಾರ್ಥಿ ವಿನಿಮಯವನ್ನು 5 ಲಕ್ಷಕ್ಕೆ ಹೆಚ್ಚಿಸಲು ಉಭಯ ರಾಷ್ಟ್ರಗಳು ತೀರ್ಮಾನಿಸಿವೆ. ಜಪಾನ್‌ನ ಜನಸಂಖ್ಯೆಯಿಂದ ಉಂಟಾಗುತ್ತಿರುವ ಕಾರ್ಮಿಕ ಕೊರತೆಯನ್ನು ನೀಗಿಸಲು ಭಾರತದ ಯುವ ಕಾರ್ಯಪಡೆ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande