ಬಾಲಿವುಡ್‌ಗೆ ಪ್ರಿಯಾಂಕಾ ಚೋಪ್ರಾ ಮರಳುವ ಲಕ್ಷಣ
ಮುಂಬಯಿ, 03 ಆಗಸ್ಟ್ (ಹಿ.ಸ.) : ಆ್ಯಂಕರ್ : ಜಾಗತಿಕ ತಾರೆ ಆಗಿ ಹೆಸರಾದ ಪ್ರಿಯಾಂಕಾ ಚೋಪ್ರಾ, ಬಾಲಿವುಡ್‌ಗೆ ಮತ್ತೆ ಕಾಲಿಡುವ ಸಾಧ್ಯತೆಗಳ ಕುರಿತು ಊಹಾಪೋಹಗಳು ಹರಿದಾಡುತ್ತಿವೆ. ಮೂಲಗಳ ಪ್ರಕಾರ, ಅವರು ಸಂಜಯ್ ಲೀಲಾ ಬನ್ಸಾಲಿ ಅವರ ಬಹು ನಿರೀಕ್ಷಿತ ಚಿತ್ರ ಲವ್ ಅಂಡ್ ವಾರ್ ನಲ್ಲಿ ವಿಶೇಷ ನೃತ್ಯ ಹಾಡಿನಲ್ಲ
Priyanka


ಮುಂಬಯಿ, 03 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜಾಗತಿಕ ತಾರೆ ಆಗಿ ಹೆಸರಾದ ಪ್ರಿಯಾಂಕಾ ಚೋಪ್ರಾ, ಬಾಲಿವುಡ್‌ಗೆ ಮತ್ತೆ ಕಾಲಿಡುವ ಸಾಧ್ಯತೆಗಳ ಕುರಿತು ಊಹಾಪೋಹಗಳು ಹರಿದಾಡುತ್ತಿವೆ. ಮೂಲಗಳ ಪ್ರಕಾರ, ಅವರು ಸಂಜಯ್ ಲೀಲಾ ಬನ್ಸಾಲಿ ಅವರ ಬಹು ನಿರೀಕ್ಷಿತ ಚಿತ್ರ ಲವ್ ಅಂಡ್ ವಾರ್ ನಲ್ಲಿ ವಿಶೇಷ ನೃತ್ಯ ಹಾಡಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಪ್ರಿಯಾಂಕಾ ಹಿಂದೆ ಬನ್ಸಾಲಿಯ ರಾಮ್-ಲೀಲಾ ಚಿತ್ರದಲ್ಲಿನ 'ರಾಮ್ ಚಾಹೇ ಲೀಲಾ' ಹಾಡಿನಲ್ಲಿ ಮಿಂಚಿದ್ದರು. ಇತ್ತೀಚೆಗೆ ಆ ಹಾಡಿನ ನೆನಪು ಹಂಚಿಕೊಂಡಿರುವ ಅವರು, ಬನ್ಸಾಲಿಯವರ ದೃಷ್ಟಿಕೋನವನ್ನು ಪುನಃ ಮೆಚ್ಚಿಕೊಂಡಿದ್ದಾರೆ.

ಲವ್ ಅಂಡ್ ವಾರ್ ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, 2026 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರಿಯಾಂಕಾ ಚೋಪ್ರಾ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರೆ, ಅವರ ಬಾಲಿವುಡ್ ಪುನರಾಗಮನವಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande