ಕೊಪ್ಪಳಕ್ಕೆ `ಎಕ್ಕ' ಚಿತ್ರದ ನಾಯಕ ಯುವರಾಜಕುಮಾರ ಭಾನುವಾರ ಭೇಟಿ
ಕೊಪ್ಪಳ, 26 ಜುಲೈ (ಹಿ.ಸ.) : ಆ್ಯಂಕರ್ : ಕನ್ನಡ ಚಿತ್ರ `ಎಕ್ಕ'' ಸಿನಿಮಾದ ನಾಯಕ ನಟ ರಾಘವೇಂದ್ರ ರಾಜ್‍ಕುಮಾರ ಅವರ ಸುಪುತ್ರ ಯುವ ರಾಜಕುಮಾರ ಅವರು ಕೊಪ್ಪಳ ನಗರದ ಶ್ರೀಲಕ್ಷ್ಮಿ ಚಿತ್ರಮಂದಿರಕ್ಕೆ ಜುಲೈ 27ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ಭೇಟಿ ನೀಡಿ, ಪ್ರೇಕ್ಷಕರ ಜೊತೆಯಲ್ಲಿ ಕೆಲ ಹೊತ್ತು ಮಾತನಾಡ
ಕೊಪ್ಪಳಕ್ಕೆ `ಎಕ್ಕ' ಚಿತ್ರದ ನಾಯಕ ಯುವರಾಜಕುಮಾರ ಭಾನುವಾರ ಭೇಟಿ


ಕೊಪ್ಪಳ, 26 ಜುಲೈ (ಹಿ.ಸ.) :

ಆ್ಯಂಕರ್ : ಕನ್ನಡ ಚಿತ್ರ `ಎಕ್ಕ' ಸಿನಿಮಾದ ನಾಯಕ ನಟ ರಾಘವೇಂದ್ರ ರಾಜ್‍ಕುಮಾರ ಅವರ ಸುಪುತ್ರ ಯುವ ರಾಜಕುಮಾರ ಅವರು ಕೊಪ್ಪಳ ನಗರದ ಶ್ರೀಲಕ್ಷ್ಮಿ ಚಿತ್ರಮಂದಿರಕ್ಕೆ ಜುಲೈ 27ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ಭೇಟಿ ನೀಡಿ, ಪ್ರೇಕ್ಷಕರ ಜೊತೆಯಲ್ಲಿ ಕೆಲ ಹೊತ್ತು ಮಾತನಾಡಲಿದ್ದಾರೆ.

`ಎಕ್ಕ' ಚಿತ್ರವು ರಾಜ್ಯಾದಾದ್ಯಂತ ಯಶಸ್ವಿ ಪ್ರದರ್ಶನಗೊಳ್ಳುತ್ತಿದ್ದು ಯಶಸ್ವಿಗೆ ಕಾರಣರಾಗಿರುವ ಹಿನ್ನಲೆಯಲ್ಲಿ ಯುವ ರಾಜಕುಮಾರ್ ಅವರು ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದು, ಅವರ ಅಭಿಮಾನಿಗಳು, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಚಲನಚಿತ್ರ ಮಂದಿರದ ಮಾಲೀಕರಾದ ವೀರೇಶ್ ಮಹಾಂತನಯ್ಯನ ಮಠ, ವಿಶ್ವನಾಥ್ ಮಹಾಂತಯ್ಯನ ಮಠ, ವ್ಯವಸ್ಥಾಪಕ ಶಿವಾನಂದಯ್ಯ ಉತ್ತಂಗಿಮಠ ಅವರು ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande