ವಿಜಯಪುರ, 29 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕ್ರೀಡೆಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಮತ್ತು ಶೈಕ್ಷಣಿಕ ಜೀವನದ ಸಮೃದ್ಧಿಗೆ ಪೂರಕವಾಗಿವೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.
ಇಂದು ಶುಕ್ರವಾರ ಡೀಮ್ಡ್ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವಪ್ರಸಿದ್ಧ ಹಾಕಿ ಕ್ರೀಡಾಪಟು ಮೇಜರ್ ಧ್ಯಾನಚಂದ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಮಾತನಾಡಿದರು.
ಇದೇ ವೇಳೆ ವಿದ್ಯಾರ್ಥಿಗಳಿಗಾಗಿ ಬ್ಯಾಸ್ಕೆಟ್‌ಬಾಲ್ ಮತ್ತು ಚೆಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸುಭಗಾ ಅವರು ಫಿಟ್ ಇಂಡಿಯಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಕ್ರೀಡಾ ನಿರ್ದೇಶಕ ಎಸ್. ಎಸ್. ಕೋರಿ, ಡಾ. ಗಿರೀಶ ಕುಲ್ಲೊಳ್ಳಿ,್ಲ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಘುವೀರ ಜಿ. ಕುಲಕರ್ಣಿ, ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಉದಯಕುಮಾರ ನುಚ್ಚಿ, ಪ್ರಾಧ್ಯಾಪಕರಾದ ಡಾ. ವಿಕಾಸ ದೇಸಾಯಿ, ಡಾ. ಜ್ಯೋತಿ ಪಾಟೀಲ, ಡಾ. ದಯಾನಂದ ಗಣ್ಣೂರ, ಡಾ. ಬಸವರಾಜ ಮೇತ್ರಿ, ಡಾ. ಪ್ರಾಚಿ ಪಾರ್ವತಿಕರ್, ಡಾ. ಎಂ. ಆರ್. ಗುಡದಿನ್ನಿ, ಡಾ. ಸಂಜಯ ವಾವರೆ, ಸುಧಾ ಸೌದಿ, ಡಾ. ಮಹಾದೇವಿ ವಾಲಿ, ಶಿವಲೀಲಾ ದೇವರಮನಿ, ಮುಂತಾದವರು ಉಪಸ್ಥಿತರಿದ್ದರು.
ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವಪ್ರಸಿದ್ಧ ಹಾಕಿ ಕ್ರೀಡಾಪಟು ಮೇಜರ್ ಧ್ಯಾನಚಂದ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಎಸ್. ಎಸ್. ಕೋರಿ, ಚರಣೆಯಲ್ಲಿ ಮಾತನಾಡಿದರು. ಡಾ. ಗಿರೀಶ ಕುಲ್ಲೊಳ್ಳಿ, ಡಾ. ರಘುವೀರ ಜಿ. ಕುಲಕರ್ಣಿ, ಡಾ. ವಿಕಾಸ ದೇಸಾಯಿ, ಡಾ. ಜ್ಯೋತಿ ಪಾಟೀಲ, ಡಾ. ದಯಾನಂದ ಗಣ್ಣೂರ, ಡಾ. ಬಸವರಾಜ ಮೇತ್ರಿ, ಡಾ. ಪ್ರಾಚಿ ಪಾರ್ವತಿಕರ್, ಡಾ. ಎಂ. ಆರ್. ಗುಡದಿನ್ನಿ, ಡಾ. ಸಂಜಯ ವಾವರೆ, ಸುಧಾ ಸೌದಿ, ಡಾ. ಮಹಾದೇವಿ ವಾಲಿ, ಶಿವಲೀಲಾ ದೇವರಮನಿ ಮುಂತಾದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande