ಬೆಂಗಳೂರು, 29 ಆಗಸ್ಟ್ (ಹಿ.ಸ.) :
ಆ್ಯಂಕರ್ : ಹಿಂದೂಗಳ ಭಕ್ತಿ ಹಾಗೂ ನಂಬಿಕೆಗಳನ್ನು ಘಾಸಿಗೊಳಿಸುವುದು ನಗರ ನಕ್ಸಲರ ಉದ್ಯೋಗವಾಗಿದೆ ಎಂದು ರಾಜ್ಯ ಬಿಜೆಪಿ ಘಟಕ ವಾಗ್ದಾಳಿ ನಡೆಸಿದೆ.
ಹಿಂದೂ ಧರ್ಮದ ನಂಬಿಕೆಗಳ ಮೇಲೆ ತಮ್ಮ ನಿರಂತರ ದಾಳಿಗಳ ನಡುವೆಯೂ, ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿನ ಭಕ್ತರ ಜನಜಂಗುಳಿ ಕೊಂಚವೂ ಕಡಿಮೆಯಾಗದಿರುವುದು ನಗರ ನಕ್ಸಲರ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ.
ಹೀಗಾಗಿ ಹಿಂದೂ ಶ್ರದ್ಧಾ ಕೇಂದ್ರಗಳಾದ ಶಬರಿಮಲೆ, ಶನಿ ಶಿಂಗಾಪುರ, ಈಶಾ ಪ್ರತಿಷ್ಠಾನ, ಧರ್ಮಸ್ಥಳಗಳ ಮೇಲೆ ಷಡ್ಯಂತ್ರ ರೂಪಿಸಿದ ಬಳಿಕ ಈಗ ಚಾಮುಂಡಿ ಬೆಟ್ಟದ ಮೇಲೆ ಸಹ ಕೆಂಗಣ್ಣು ಬೀರಿರುವುದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ.
ಘಜ್ನಿ, ಘೋರಿ, ಔರಂಗಜೇಬನಂತಹ ಕ್ರೂರಿ ಮತಾಂಧರನ್ನು ಎದುರಿಸಿದ ಬಳಿಕವೂ ಹಿಂದೂ ಸಮಾಜ ಪುಟಿದೆದ್ದು ನಿಂತಿದೆ, ಅಂತಹದರಲ್ಲಿ ನಗರ ನಕ್ಸಲರ ಇಂತಹ ಷಡ್ಯಂತ್ರಗಳು ತೃಣಕ್ಕೆ ಸಮ ಎಂದು ಬಿಜೆಪಿ ಹೇಳಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa