ವಿಜಯಪುರ, 29 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗ್ರಾಹಕರ ಪ್ರೀತಿ ಮತ್ತು ವಿಶ್ವಾಸದ ಫಲವಾಗಿ ನಗರದ ಪಾಟೀಲ ಹೊಂಡಾ ಸೇವೆ ಮತ್ತು ಮಾರಾಟದಲ್ಲಿ ದೇಶದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಮತ್ತು ಪಾಟೀಲ ಹೊಂಡಾ ವ್ಯವಸ್ಥಾಪಕ ನಿರ್ದೇಶಕ ಹೇಳಿದ್ದಾರೆ.
ಇಂದು ಶುಕ್ರವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಹೊಂಡಾ ಶೈನ್ ಡಿಎಮ್‌ಎಕ್ಸ್ 100 ಮತ್ತು ಹಾರ್ನೆಟ್ ಸಿ.ಬಿ 125 ಮಾದರಿಯ ನೂತನ ಬೈಕ್ ಬಿಡುಗಡೆ ಕ್ರಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಟೀಲ ಹೊಂಡಾ ವಿಜಯಪುರ ಜಿಲ್ಲೆಯಲ್ಲಿ 13 ಮತ್ತು ಬಾಗಲಕೋಟೆ ಜಿಲ್ಲೆ 9 ಸೇರಿದಂತೆ ಒಟ್ಟು 22 ಶಾಖೆಗಳನ್ನು ಹೊಂದಿದ್ದು, ಎರಡು ಲಕ್ಷ ವಾಹನಗಳನ್ನು ಮಾರಾಟ ಮಾಡಲಾಗಿದೆ. ನಮ್ಮಲ್ಲಿ ದೊಡ್ಡ ನಗರಗಳಿಗಿಂತಲೂ ಹೆಚ್ಚು ಬೈಕುಗಳು ಮಾರಾಟವಾಗುತ್ತಿವೆ. ಐಟಿಐ, ಡಿಪ್ಲೋಮಾ ಹಾಗೂ ಎಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದ್ದೇವೆ. ಅಲ್ಲದೇ, ಮುಂದೆಯು ಈ ಭಾಗದ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತೇವೆ. ನಮ್ಮ ಈ ಸಾಧನೆಗೆ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ, ಪ್ರೀತಿ ಹಾಗೂ ಸ್ಪಂದನೆ ಕಾರಣವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹೊಂಡಾ ಕಂಪನಿಯ ಉತ್ತರ ಕರ್ನಾಟಕ ವಲಯ ವ್ಯವಸ್ಥಾಪಕ ಪ್ರವೀಣ ಶರ್ಮಾ, ವಲಯ ಉಸ್ತುವಾರಿ ವಿಷ್ಣು ಕೆ.ಟಿ, ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಪಿ, ಪಾಟೀಲ ಹೊಂಡಾ ಮುಖ್ಯ ಕಾರ್ಯನಿರ್ವಹಣೆ ಅಧಿಕಾರಿ ಆದಿತ್ಯ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಪ್ರಿಯಾಂಕ ಅರ್ಜುನ ಕಾಲವಾಡ, ಕಾರ್ತಿಕ ಪಾಟೀಲ ನಿರೂಪಿಸಿದರು. ಗ್ಯಾಬ್ರೀಯಲ್ ಶರವೀನ್ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಎಂಜಿನೀಯರಿಂಗ್ ಕಾಲೇಜಿನ ಕಲರವ ತಂಡದ ಸದಸ್ಯರು ಡಾ. ವೈ. ಎ. ಕುಲಕರ್ಣಿ ಮತ್ತು ವೀಣಾ ಪಾಟೀಲ ಅವರ ಪಾಟೀಲ ಮಾರ್ಗದರ್ಶನದಲ್ಲಿ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande