ಶಾಸಕ ಯತ್ನಾಳ ವಿರುದ್ಧ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಲೇವಡಿ
ವಿಜಯಪುರ, 29 ಆಗಸ್ಟ್ (ಹಿ.ಸ.) : ಆ್ಯಂಕರ್ : ಗಣೇಶೋತ್ಸವದಲ್ಲಿ ಸಾರ್ವಜನಿಕ ಗಣೇಶ ಮಂಡಳಿಗಳಿಗಳಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಐದು ಸಾವಿರ ದೇಣಿಗೆ ಕೊಡುತ್ತಾರೆ. ಐದು ವರ್ಷಗಳ ಅವಧಿಯಲ್ಲಿ ಒಂದೇ ಬಾರಿ ನೀಡಿ ನಾಲ್ಕು ವರ್ಷಗಳ ಕಾಲ ಮಾಯವಾಗುತ್ತಾರೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ್ ಪಟ್
ಶಾಸಕ ಯತ್ನಾಳ ವಿರುದ್ಧ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಲೇವಡಿ


ವಿಜಯಪುರ, 29 ಆಗಸ್ಟ್ (ಹಿ.ಸ.) :

ಆ್ಯಂಕರ್ : ಗಣೇಶೋತ್ಸವದಲ್ಲಿ ಸಾರ್ವಜನಿಕ ಗಣೇಶ ಮಂಡಳಿಗಳಿಗಳಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಐದು ಸಾವಿರ ದೇಣಿಗೆ ಕೊಡುತ್ತಾರೆ. ಐದು ವರ್ಷಗಳ ಅವಧಿಯಲ್ಲಿ ಒಂದೇ ಬಾರಿ ನೀಡಿ ನಾಲ್ಕು ವರ್ಷಗಳ ಕಾಲ ಮಾಯವಾಗುತ್ತಾರೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಲೇವಡಿ ಮಾಡಿದರು. ವಿಜಯಪುರ ನಗರದಲ್ಲಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ಸಾವಿರ ಕೊಟ್ಟಂಗ ಮಾಡಿ ಶಾಸಕ ಯತ್ನಾಳ ಪ್ರಚಾರ ಪಡೆಯುತ್ತಾರೆ. ಈ ಹಿಂದೆ ಸಂಸದರಿದ್ದಾಗಲೂ ಕೊಟ್ಟಿಲ್ಲ. ಶಾಸಕರಿದ್ದಾಗಲೂ ಕೊಟ್ಟಿಲ್ಲ. ಈ ಬಾರಿ ಕೊಟ್ಟಿದ್ದಾರೆ. ನಾನು ಮಾತ್ರ ಪ್ರತಿ ವರ್ಷ ದೇಣಿಗೆ ನೀಡುತ್ತಾ ಬಂದಿದ್ದೇನೆ ಎಂದರು.

ವಿಜಯಪುರ ನಗರ ಹಾಗೂ ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಸ್ತೆಗಳು ಹದಗೆಟ್ಟು ಹೋಗಿವೆ. ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇತ್ತೀಚೆಗೆ ಲೋಕಾಯುಕ್ತ ದಾಳಿ ನಡೆದಿದ್ದೆ ಸಾಕ್ಷಿ. ಇನ್ನೂ ಶಾಸಕ ಯತ್ನಾಳ ವಿಜಯಪುರದ ವಕೀಲನ ಕುರಿತು ಮಾತನಾಡಿ ಕಾಲಹರಣ ಮಾಡಿದರೂ. ‌ವಕೀಲನು ಮಾತನಾಡಿದ್ದು ತಪ್ಪು, ವ್ಯಯಕ್ತಿಕವಾಗಿ ಮಾತನಾಡಿದ್ದು ತಪ್ಪು. ಇತ್ತ ಯತ್ನಾಳ ಮಾತನಾಡಿದ್ದು ಕೂಡಾ ತಪ್ಪು ಎಂದರು.

ಇನ್ನೂ ಮುಂದಿನ ಚುನಾವಣೆಯಲ್ಲಿ ಇಂಡಿ ಮತಕ್ಷೇತ್ರದಲ್ಲಿ ಸ್ಪರ್ಧೆ ಕುರಿತು ಖಚಿತ ಪಡಿಸಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ನಾನು ಈಗ ಜಿಲ್ಲೆಯ ಲೀಡರ್ ಆಗಿದ್ದಿನಿ ಅನಿಸುತ್ತಿದೆ. ಅಲ್ಲಿ ಹೋಗ್ತಾರ ಇಲ್ಲಿಗೆ ಹೋಗ್ತಾರೆ ಅನ್ನೋ ವಾತಾವರಣ ನಿರ್ಮಾಣವಾಗಿದೆ ಎಂದು ನಗೆ ಚಟಾಕಿ ಹಾರಿಸಿದರು. ಮಹಾನಗರ ಪಾಲಿಕೆ ಸದಸ್ಯರುಗಳು ಅತಂತ್ರ ಸ್ಥಿತಿಯಲ್ಲಿ ಇದ್ದಾರೆ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande