ಹದಗೆಟ್ಟ ರಸ್ತೆಯಿಂದಾಗಿ ಬಸ್ ಅಪಘಾತ
ವಿಜಯಪುರ, 29 ಆಗಸ್ಟ್ (ಹಿ.ಸ.) : ಆ್ಯಂಕರ್ : ಹದಗೆಟ್ಟ ರಸ್ತೆಯಿಂದ ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ರಸ್ತೆಯ ಬದಿಯ ಮುಳ್ಳಿನ ಕಂಠಿನೊಳಗೆ ನುಗ್ಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಖಾನಾಪುರ ಬ್ರಹ್ಮದೇವನಮಡು ರಸ್ತೆಯ ನಡುವೆ ನಡೆದಿದೆ. 10ಕ್ಕೂ ಹೆಚ್ಚು ಪ್ರಯಾಣಿಕರು ಈ ಬಸ್‌ನಲ್ಲ
ಬಸ್


ವಿಜಯಪುರ, 29 ಆಗಸ್ಟ್ (ಹಿ.ಸ.) :

ಆ್ಯಂಕರ್ : ಹದಗೆಟ್ಟ ರಸ್ತೆಯಿಂದ ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ರಸ್ತೆಯ ಬದಿಯ ಮುಳ್ಳಿನ ಕಂಠಿನೊಳಗೆ ನುಗ್ಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಖಾನಾಪುರ ಬ್ರಹ್ಮದೇವನಮಡು ರಸ್ತೆಯ ನಡುವೆ ನಡೆದಿದೆ.

10ಕ್ಕೂ ಹೆಚ್ಚು ಪ್ರಯಾಣಿಕರು ಈ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರೂ, ಯಾವದೇ ಪ್ರಾಣ ಹಾನಿಯಾಗಿಲ್ಲ. ಈ ರಸ್ತೆಯಲ್ಲಿ ಎರಡನೇ ಬಾರಿಗೆ ಇಂತಹ ಘಟನೆ ಸಂಭವಿಸಿದೆ. ಅದಕ್ಕಾಗಿ ರಸ್ತೆ ಸರಿಪಡಿಸಲು ಪ್ರಯಾಣಿಕರು ಸಂಬಂಧಪಟ್ಟ ಇಲಾಖೆಗೆ ಆಗ್ರಹಿಸಿದ್ದಾರೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande