ಶಿವಮೊಗ್ಗ, 29 ಆಗಸ್ಟ್ (ಹಿ.ಸ.) :
ಆ್ಯಂಕರ್ : ಉಡುಪಿ ಜಿಲ್ಲೆಯಲ್ಲಿ ನಡೆದ 23 ವರ್ಷ ವಯೋಮಿತಿಯೊಳಗಿನ ಕರ್ನಾಟಕ ರಾಜ್ಯ ಕಿರಿಯರ ಅಥ್ಲೇಟಿಕ್ ಕ್ರೀಡಾಕೂಟ-2025ರಲ್ಲಿ ಶಿವಮೊಗ್ಗ ಜಿಲ್ಲೆಯಿಂದ 12 ಜನ ಕ್ರೀಡಾಪಟುಗಳು ಭಾಗವಹಿಸಿ ವಿಜೇತರಾಗಿದ್ದಾರೆ.
ಎತ್ತರ ಜಿಗಿತದಲ್ಲಿ ಅನ್ವಿತ ಎಂ.ಆರ್.ಪ್ರಥಮ, ಆರೋನ್ ಎನ್.ಬಿ.-ದ್ವಿತೀಯ ಹಾಗೂ ಸುದೀಪ್ ಪ್ರಥಮ ಮತ್ತು ಕೂಟ ದಾಖಲೆ. 600ಮೀ ಓಟದಲ್ಲಿ ಶರತ್ ಕೆ.ಜೆ., ಪ್ರಥಮ ಮತ್ತು ಉತ್ತಮ ಅಥ್ಲೆಟಿಕ್ ಕ್ರೀಡಾಪಟು. 60 ಮೀ ಓಟದಲ್ಲಿ ಸಂಜಯ್ ಎಸ್.ಹೆಚ್.- ಪ್ರಥಮ ಹಾಗೂ ಸಚಿನ್ ಜಾಧವ್ ದ್ವಿತೀಯ. 80 ಮೀ ಹರ್ಡಲ್ಸ್ನಲ್ಲಿ ಸಿರಿ ಕೆ.ಜೆ.-ದ್ವಿತೀಯ. ಕಿಡ್ಸ್ ಜಾವಲಿನ್‌ನಲ್ಲಿ ಪದ್ಮಾವತಿ ಪ್ರಥಮ, ಪ್ರೇಕ್ಷಾ ಎಲ್.ಗೌಡ ದ್ವಿತೀಯ ಹಾಗೂ ಅಮಿತ್-ದ್ವಿತೀಯ. 100 ಮೀ ಓಟದಲ್ಲಿ ಗೌತಮ್ ತೃತೀಯ. ಟ್ರಯಾಥ್‌ಲೈನ್‌ನಲ್ಲಿ ಪದ್ಮಾವತಿ ತೃತೀಯ ಸ್ಥಾನಗಳನ್ನು ಪಡೆದು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ವಿಜೇತರಾದ ಕ್ರೀಡಾಪಟುಗಳಿಗೆ ಕ್ರೀಡಾ ವಸತಿ ನಿಲಯದಲ್ಲಿ ಅಥ್ಲೇಟಿಕ್ ತರಬೇತುದಾರರಾದ ಬಾಳಪ್ಪ ಮಾನೆರವರು ದೈನಂದಿನ ತರಬೇತಿ ನೀಡುತ್ತಿದ್ದಾರೆ. ಶಿವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ್ ಮತ್ತು ಸಿಬ್ಬಂದಿವರ್ಗದವರು ಹಾಗೂ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಉದಯಕುಮಾರ್ ಶುಭ ಹಾರೈಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa