ಬಾಲಕಿಗೆ ಹೆರಿಗೆ ; ನಾಲ್ವರ ಅಮಾನತು ; ಬಾಲಕಿಯ ಸಹೋದರನ ಮೇಲೂ ಪ್ರಕರಣ ದಾಖಲು
ಯಾದಗಿರಿ, 28 ಆಗಸ್ಟ್ (ಹಿ.ಸ.) : ಆ್ಯಂಕರ್ : ವಸತಿ ಶೌಚಾಲಯದಲ್ಲಿ 9ನೇ ತರಗತಿ ಬಾಲಕಿಗೆ ಹೆರಿಗೆ ಮಾಡಿಸಿರುವ ಘಟನೆಗೆ ಸಂಬಂಧಿಸಿದಂತೆ ವಸತಿ ಶಾಲೆಯ ನಾಲ್ವರನ್ನು ಅಮಾನತು ಮಾಡಿ ಬಾಲಕಿಯ ಸಹೋದರನ ಮೇಲೆ ಬಿಎನ್‍ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಕಾನೂನಾತ್ಮಕ ಕ್ರಮಗಳನ್ನು ಪೊಲೀಸ್ ಇಲಾಖೆ ಪ್ರಾರಂ
ಬಾಲಕಿಗೆ ಹೆರಿಗೆ ; ನಾಲ್ವರ ಅಮಾನತು ; ಬಾಲಕಿಯ ಸಹೋದರನ ಮೇಲೂ ಪ್ರಕರಣ ದಾಖಲು


ಯಾದಗಿರಿ, 28 ಆಗಸ್ಟ್ (ಹಿ.ಸ.) :

ಆ್ಯಂಕರ್ : ವಸತಿ ಶೌಚಾಲಯದಲ್ಲಿ 9ನೇ ತರಗತಿ ಬಾಲಕಿಗೆ ಹೆರಿಗೆ ಮಾಡಿಸಿರುವ ಘಟನೆಗೆ ಸಂಬಂಧಿಸಿದಂತೆ ವಸತಿ ಶಾಲೆಯ ನಾಲ್ವರನ್ನು ಅಮಾನತು ಮಾಡಿ ಬಾಲಕಿಯ ಸಹೋದರನ ಮೇಲೆ ಬಿಎನ್‍ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಕಾನೂನಾತ್ಮಕ ಕ್ರಮಗಳನ್ನು ಪೊಲೀಸ್ ಇಲಾಖೆ ಪ್ರಾರಂಭಿಸಿದೆ.

ಶಹಾಪೂರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನನ ನೀಡಿದ್ದು, ತಾಯಿ - ಮಗು ಆರೋಗ್ಯವಾಗಿದ್ದಾರೆ.

ವಸತಿ ನಿಲಯದ ಪ್ರಾಂಶುಪಾಲೆ ಬಸಮ್ಮ ಪಾಟೀಲ್, ವಾರ್ಡನ್ ಗೀತಾ, ವಿಜ್ಞಾನ ಶಿಕ್ಷಕ ನರಸಿಂಹ ಮೂರ್ತಿ, ದೈಹಿಕ ಶಿಕ್ಷಕ ಶ್ರೀಧರ ಅವರನ್ನು ಕರ್ತವ್ಯ ಲೋಪ ಆರೋಪದ ಮೇಲೆ ಅಮಾನತ್ತು ಮಾಡಲಾಗಿದೆ. ನರ್ಸ್ ಕಾವೇರಮ್ಮ, ಬಾಲಕಿಯ ಆಣ್ಣ ಶರಣಬಸವನ ಮೇಲೆ ಶಹಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande