ವಿಜಯಪುರ, 28 ಆಗಸ್ಟ್ (ಹಿ.ಸ.) :
ಆ್ಯಂಕರ್ : ತೋಳಗಳು ದಾಳಿಗೈದಿರುವ ಪರಿಣಾಮ ಕುರಿಗಳು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಗಬೇನಾಳ ಗ್ರಾಮದಲ್ಲಿ ನಡೆದಿದೆ.
ನಾಗಬೇನಾಳ ಗ್ರಾಮದ ಸಿದ್ಧಪ್ಪ ಸುಲ್ತಾನಪುರ ಮತ್ತು ಮಲ್ಲಪ್ಪ ಪುಟ್ಟಿ ಇವರ ಕುರಿಗಳು ತೋಳಕ್ಕೆ ಬಲಿಯಾಗಿದ್ದಾವೆ. ದಾಳಿಯಿಂದಾಗಿ ಎರಡು ಕುಟುಂಬಗಳು ಸಂಕಟಕ್ಕೀಡಾಗಿವೆ.
ಘಟನಾ ಸ್ಥಳಕ್ಕೆ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ ಎಸ್ ಪಾಟೀಲ ನಡಹಳ್ಳಿ ಭೇಟಿ ನೀಡಿ ರೈತರ ಕುಟುಂಬಕ್ಕೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.
ಸಂಬಂಧಿತ ಇಲಾಖೆ ಹಾಗೂ ಸರ್ಕಾರ ತಕ್ಷಣ ಕ್ರಮ ಕೈಗೊಂಡು ರೈತರಿಗೆ ಪರಿಹಾರ ನೀಡುವಂತೆ ಎಂದು ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande