ರಾಯಚೂರು, 28 ಆಗಸ್ಟ್ (ಹಿ.ಸ.) :
ಆ್ಯಂಕರ್ : ರಾಯಚೂರು ಪ್ರವಾಸದಲ್ಲಿದ್ದ ಉಪ ಲೋಕಾಯುಕ್ತರಾದ ನ್ಯಾ. ಬಿ ವೀರಪ್ಪ ಅವರು ಆಗಸ್ಟ್ 28ರಂದು ಊಟದ ವಿರಾಮದ ನಂತರ ನಗರದಲ್ಲಿನ ಹಳೆಯ ಮಹಾನಗರ ಪಾಲಿಕೆಯ ಕಚೇರಿಗೆ ಭೇಟಿ ನೀಡಿದರು.
ಬಹುಮುಖ್ಯವಾದ ಸರ್ಕಾರಿ ಸ್ವತ್ತಿನ ಅತಿಕ್ರಮಣವು ಕೂಡಲೇ ತೆರವಾಗಬೇಕು ಎಂದು ದಾಖಲಾದ, ದಾಖಲಾಗುವ ದೂರಿನ ಪ್ರಕರಣಗಳ ವಿಲೆಗೆ ಪಾಲಿಕೆಯ ಅಧಿಕಾರಿಗಳು ಮೊದಲಾದ್ಯತೆ ನೀಡಬೇಕು ಎಂದು ಭೇಟಿ ವೇಳೆಯಲ್ಲಿ, ಉಪ ಲೋಕಾಯುಕ್ತರಾದ ಬಿ ವೀರಪ್ಪ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.
ನಗರದಲ್ಲಿನ ಸಾರ್ವಜನಿಕ ಆಸ್ತಿಗಳಾದ ಕೆರೆ, ಬಾವಿ ಜಾಗ, ರಸ್ತೆ ಪ್ರದೇಶವನ್ನು ಯಾರು ಸಹ ಒತ್ತುವರಿ ಮಾಡದಂತೆ ನೋಡಿಕೊಳ್ಳಬೇಕು. ಇದು ಪಾಲಿಕೆಯ ಬಹುಮುಖ್ಯ ಕಾರ್ಯ. ಕರ ವಸೂಲಿಯನ್ನು ಸಹ ನಿಯಮಿತವಾಗಿ ನಡೆಸಿ ಅದರಿಂದ ಬರುವ ಆದಾಯದಿಂದ ನಗರದ ನಿವಾಸಿಗಳಿಗೆ ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಸರಿಯಾದ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತು ನೀಡಬೇಕು ಎಂದು ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್