ವಿಜಯಪುರ, 28 ಆಗಸ್ಟ್ (ಹಿ.ಸ.) :
ಆ್ಯಂಕರ್ : ವೈದ್ಯಕೀಯ ಕಾಲೇಜು ಹೆಸರಿನಲ್ಲಿ ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಬೇಡ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಪಿಪಿಪಿ(ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್ಸ್‌ಶಿಫ್) ಮಾದರಿಯ ಕಾಲೇಜು ವಿಜಯಪುರ ಜಿಲ್ಲೆಗೆ ಬೇಡ. ಇದರಿಂದ ಜನರಿಗೆ ಅನುಕೂಲ ಆಗುವುದಿಲ್ಲ. ರಾಜ್ಯದಲ್ಲಿ ಯಾವುದೇ ಪಿಪಿಪಿ ಮಾದರಿ ಮಾಡಿಲ್ಲ. ವಿಜಯಪುರಕ್ಕೆ ಮಾತ್ರ ಯಾಕೆ ಪಿಪಿಪಿ ಮಾದರಿ ಎಂದು ಪ್ರಶ್ನಿಸಿದರು.
ಇನ್ನು ಇದರಿಂದ ಜನತೆಗೆ ಶೋಷಣೆ ಆಗುತ್ತದೆ. ಅದಕ್ಕಾಗಿ ಬಾಗಲಕೋಟೆ ಪಿಪಿಪಿ ಮಾದರಿ ಆಸ್ಪತ್ರೆ ಮಾಡಬಹುದು ಸಲಹೆ ನೀಡಿದರು.
ಮೆಡಿಕಲ್ ಕಾಲೇಜು ನಡೆಯಲು ಎಲ್ಲ ಸವಲತ್ತುಗಳು ನಾನು ವ್ಯವಸ್ಥೆ ಮಾಡಿದೆ. ಇಲ್ಲಿಯ ವರೆಗೂ ಸರ್ಕಾರ ಸ್ಪಂದಿಸಿಲ್ಲ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande