ಸಮಾಜ ಕಲ್ಯಾಣ ಇಲಾಖೆಗೆ ಉಪ ಲೋಕಾಯುಕ್ತರ ಭೇಟಿ
ರಾಯಚೂರು, 28 ಆಗಸ್ಟ್ (ಹಿ.ಸ.) : ಆ್ಯಂಕರ್ : ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮಹಾನಗರ ಪಾಲಿಕೆಯ ಭೇಟಿ ನಂತರ ನೇರವಾಗಿ ರಂಗಮAದಿರ ಹಿಂದಿನ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ತೆರಳಿದರು. 2023ನೇ ಸಾಲಿನಿಂದ 2025ನೇ ಸಾಲಿನ ಮೂರು ವರ್ಷಗಳ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿ
ಸಮಾಜ ಕಲ್ಯಾಣ ಇಲಾಖೆಗೆ ಭೇಟಿ: ಆಯ್ಕೆಯಾದ ಎಲ್ಲ ಮಕ್ಕಳಿಗೆ ವಸತಿ ನೀಡಿದ್ದೀರಾ?


ಸಮಾಜ ಕಲ್ಯಾಣ ಇಲಾಖೆಗೆ ಭೇಟಿ: ಆಯ್ಕೆಯಾದ ಎಲ್ಲ ಮಕ್ಕಳಿಗೆ ವಸತಿ ನೀಡಿದ್ದೀರಾ?


ರಾಯಚೂರು, 28 ಆಗಸ್ಟ್ (ಹಿ.ಸ.) :

ಆ್ಯಂಕರ್ : ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮಹಾನಗರ ಪಾಲಿಕೆಯ ಭೇಟಿ ನಂತರ ನೇರವಾಗಿ ರಂಗಮAದಿರ ಹಿಂದಿನ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ತೆರಳಿದರು.

2023ನೇ ಸಾಲಿನಿಂದ 2025ನೇ ಸಾಲಿನ ಮೂರು ವರ್ಷಗಳ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ನೋಂದಣಿಯಾದ ವಿದ್ಯಾರ್ಥಿಗಳು ಎಷ್ಟು?

ಪಾಸಾದ ವಿದ್ಯಾರ್ಥಿಗಳು ಎಷ್ಟು? ಎಂದು ಮಾಹಿತಿ ಒದಗಿಸಬೇಕು. ಆಯಾ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮುಂದೇನು ಮಾಡಿದರು? ಇಲಾಖೆಯ ವಸತಿ ನಿಲಯದಲ್ಲಿ ಅವರ ಪ್ರವೇಶ ಮುಂದುವರೆಯಿತಾ? ಅಥವಾ ಇಲ್ಲ? ಈ ಬಗ್ಗೆ ಇಲಾಖೆಯಿಂದ ಯಾವ ಕ್ರಮ ಆಯಿತು? ಎಂಬುದರ ಬಗ್ಗೆ ವರ್ಷವಾರು, ಗಂಡು ಮತ್ತು ಹೆಣ್ಣು ವಿಂಗಡಣೆವಾರು ಮಾಹಿತಿ ನೀಡಬೇಕು ಎಂದು ಇದೆ ವೇಳೆ ಉಪ ಲೋಕಾಯುಕ್ತರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಿಂಧೂ ಅವರಿಗೆ ಸೂಚನೆ ನೀಡಿದರು.

ಇಲಾಖೆಯ ಅಧೀನದಲ್ಲಿನ ಎಲ್ಲ ವಸತಿ ನಿಲಯಗಳು ಸರಿಯಾಗಿ ನಿರ್ವಹಣೆ ಆಗಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande