ಕೊಪ್ಪಳ : ಮಂಗಳೂರಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರ ಪ್ರತಿಭಟನೆ
ಕೊಪ್ಪಳ, 28 ಆಗಸ್ಟ್ (ಹಿ.ಸ.) : ಆ್ಯಂಕರ್ : ಕುಕನೂರ ತಾಲೂಕಿನ ಮಂಗಳೂರು ಗ್ರಾಮದ ರೈತ ಸಂಪರ್ಕ ಕೇಂದ್ರದ ಮುಂಭಾಗದಲ್ಲಿ ಮಂಗಳೂರು ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ರೈತ ಸಂಪರ್ಕ ಕೇಂದ್ರದ ಕಚೇರಿಯನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಯಲಬುರ್ಗಾ ತ
ಕೊಪ್ಪಳ : ಮಂಗಳೂರಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರ ಪ್ರತಿಭಟನೆ


ಕೊಪ್ಪಳ : ಮಂಗಳೂರಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರ ಪ್ರತಿಭಟನೆ


ಕೊಪ್ಪಳ, 28 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕುಕನೂರ ತಾಲೂಕಿನ ಮಂಗಳೂರು ಗ್ರಾಮದ ರೈತ ಸಂಪರ್ಕ ಕೇಂದ್ರದ ಮುಂಭಾಗದಲ್ಲಿ ಮಂಗಳೂರು ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ರೈತ ಸಂಪರ್ಕ ಕೇಂದ್ರದ ಕಚೇರಿಯನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಿದರು.

ನಂತರ ಪ್ರತಿಭಟನಾ ಸ್ಥಳಕ್ಕೆ ಯಲಬುರ್ಗಾ ತಾಲೂಕ ಸಹಾಯಕ ಕೃಷಿ ನಿರ್ದೇಶಕರಾದ ಪ್ರಮೋದ ಅವರು ಭೇಟಿ ಮಾಡಿ ರೈತರೊಂದಿಗೆ ಮಾತನಾಡಿ ಮೂರು ನಾಲ್ಕು ದಿನಗಳ ಒಳಗಾಗಿ ಸಮರ್ಪಕ ರಸಗೊಬ್ಬರ ಪೂರೈಸುವುದಾಗಿ ಈ ಸಂದರ್ಭದಲ್ಲಿ ನೆರೆದಿದ್ದ ರೈತರಿಗೆ ಭರವಸೆ ನೀಡಿದರು ನಂತರ ಅಧಿಕಾರಿಗಳ ಮಾತಿಗೆ ರೈತರು ಗೌರವ ಕೊಟ್ಟು ಪ್ರತಿಭಟನೆಯನ್ನು ಹಿಂಪಡೆದರು.

ಈ ಸಂದರ್ಭದಲ್ಲಿ ಮಂಗಳೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಿಂಗಪ್ಪ ಹಿರೇಹಾಳ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಶರಣಪ್ಪ ಹ್ಯಾಟಿ, ನಿರ್ದೇಶಕರಾದ ಮಹಾಲಿಂಗಯ್ಯ ಕಲ್ಮಠ, ಗಂಗಾಧರ ಬಡಿಗೇರ, ಲಿಂಗರಾಜ ವಿವೇಕಿ, ಸಿಇಓ ಹನಮಗೌಡ್ರ ಈಳಗೇರ, ಸಿಬ್ಬಂದಿ ವರ್ಗದವರು, ರೈತರಾದ ಮಂಗಳೇಶಪ್ಪ ಬಗನಾಳ, ಶಂಕ್ರಗೌಡ್ರ ಕೀರ್ತಗೌಡ್ರ, ಗವಿಸಿದ್ದಯ್ಯ ಅರಳಲೆಹಿರೇಮಠ, ಮುತ್ತಣ್ಣ ಬಾರಿನರ, ದುರುಗೇಶ ಹಳ್ಳಿ, ಮಂಗಳೇಶಪ್ಪ ಕಿನ್ನಾಳ, ರವೀಂದ್ರನಾಥ ಕೊಟ್ರಪ್ಪ ತೋಟದ,ಶಿವಪುತ್ರಪ್ಪ ಪೂಜಾರ, ಪುತ್ರಪ್ಪ ಕುದ್ರಿಮೋತಿ, ಖಾಜಾಸಾಬ ನೂರಭಾಷ, ಮಲ್ಲಪ್ಪ ಎಮ್ಮಿ,ಮಂಗಳಪ್ಪ ಕುಂಬಾರ,ಖಾಜಾಸಾಬ ಹಂಚಿನಾಳ,ಮುತ್ತಣ್ಣ ತಳವಾರ, ಇತರ ರೈತರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande