ಖಾದಿ ಉತ್ಸವದಲ್ಲಿ ಪರಿಸರ ಮತ್ತು ನೈಸರ್ಗಿಕ ಸ್ನೇಹಿ ಉತ್ಪನ್ನ : ಕೆ.ವಿರೇಶ್
ಕೊಪ್ಪಳ, 28 ಆಗಸ್ಟ್ (ಹಿ.ಸ.) : ಆ್ಯಂಕರ್ : ಖಾದಿ ಉತ್ಸವದಲ್ಲಿ ಪರಿಸರ ಮತ್ತು ನೈಸರ್ಗಿಕ ಸ್ನೇಹಿತವಾದ ಖಾದಿ ಮತ್ತು ಇತರೆ ಉತ್ಪನ್ನಗಳನ್ನು ಮಾರಾಟಕ್ಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೊದ್ಯೋಗ ಮಂಡಳಿ ಕೊಪ್ಪಳ ಜಿಲ್ಲಾ ಅಭಿವೃದ್ಧಿ ಅ
ಖಾದಿ ಉತ್ಸವದಲ್ಲಿ ಪರಿಸರ ಮತ್ತು ನೈಸರ್ಗಿಕ ಸ್ನೇಹಿ ಉತ್ಪನ್ನಗಳು ಲಭ್ಯ: ಕೆ.ವಿರೇಶ್


ಕೊಪ್ಪಳ, 28 ಆಗಸ್ಟ್ (ಹಿ.ಸ.) :

ಆ್ಯಂಕರ್ : ಖಾದಿ ಉತ್ಸವದಲ್ಲಿ ಪರಿಸರ ಮತ್ತು ನೈಸರ್ಗಿಕ ಸ್ನೇಹಿತವಾದ ಖಾದಿ ಮತ್ತು ಇತರೆ ಉತ್ಪನ್ನಗಳನ್ನು ಮಾರಾಟಕ್ಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೊದ್ಯೋಗ ಮಂಡಳಿ ಕೊಪ್ಪಳ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೆ.ವಿರೇಶ್ ಅವರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೊದ್ಯೋಗ ಮಂಡಳಿ, ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕೊಪ್ಪಳ ಇವರ ಸಹಯೋಗದೊಂದಿಗೆ ಸರ್ಕಾರದವತಿಯಿಂದ “ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ ಮಾರಾಟ “ಖಾದಿ ಉತ್ಸವ-2025” ಮೇಳವನ್ನು ಆ. 24 ರಿಂದ ಸೆಪ್ಟೆಂಬರ್ 2ರ ವರೆಗೆ ಒಟ್ಟು 10 ದಿನಗಳ ಕಾಲ ಕೊಪ್ಪಳ ನಗರದ ಹೊಸಪೇಟ್ ರಸ್ತೆಯ ನಗರಸಭೆ ಎದುರುಗಡೆಯ ಶಾದಿ ಮಹಲ್‌ನಲ್ಲಿ ಏರ್ಪಡಿಸಲಾಗಿದ್ದು, ಈ ವಸ್ತುಪ್ರದರ್ಶನವನ್ನು ಇತ್ತೀಚೆಗೆ (ರವಿವಾರ) ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೊದ್ಯೋಗ ಮಂಡಳಿಯ ಅಧ್ಯಕ್ಷರು ಹಾಗೂ ಮಸ್ಕಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಬಸವನಗೌಡ ತುರುವಿಹಾಳ ಮತ್ತು ಕೊಪ್ಪಳದ ಸ್ಥಳೀಯ ಶಾಸಕರು ಹಾಗೂ ಇತರೆ ಮುಖಂಡರುಗಳಿಂದ ಚಾಲನೆ ನೀಡಲಾಗಿದೆ.

ಈ ರಾಜ್ಯ ಮಟ್ಟದ ಖಾದಿ ಗ್ರಾಮೋದ್ಯೋಗ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಉತ್ತರಪ್ರದೇಶ, ಬಿಹಾರ, ಜಾರ್ಖಂಡ, ಕಾಶ್ಮೀರ, ಮಹಾರಾಷ್ಟ್ರ ರಾಜ್ಯಗಳಿಂದ ಹಾಗೂ ಕರ್ನಾಟಕದ ಜಿಲ್ಲೆಗಳಿಂದ ಖಾದಿ ಬಟ್ಟೆಗಳು, ರೇಷ್ಮೆ ಸೀರೆಗಳು ಮತ್ತು ಕರಕುಶಲ ವಸ್ತುಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದ್ದು, ಈ ವರಗೆ ಸಾರ್ವಜನಿಕರಿಂದ ರಿಯಾಯತಿ ದರದಲ್ಲಿ ಖಾದಿ ಉತ್ಪನ್ನಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಆ. 24 ರಿಂದ ಆ. 27 ರವರಗೆ 4 ದಿನಗಳಿಗೆ ಒಟ್ಟು ಮಾರಾಟ 25 ಲಕ್ಷ ಮೌಲ್ಯದ ಖಾದಿ ಉತ್ಪನ್ನಗಳು ಮಾರಾಟವಾಗಿರುತ್ತದೆ. ಒಟ್ಟಾರೆ 10 ದಿನಗಳಿಗೆ ಮಾರಾಟದ ಗುರಿ 2 ಕೋಟಿ ನಿರೀಕ್ಷೆ ಇದ್ದು, ಸಾರ್ವಜನಿಕರು ಇನ್ನು ಹೆಚ್ಚಿನ ರೀತಿ ಖಾದಿ ಉತ್ಪನ್ನಗಳನ್ನು ಖರೀದಿಸಬೇಕು. ಸೆಪ್ಟೆಂಬರ್ 2ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ಖಾದಿ ಗ್ರಾಮೋದ್ಯೋಗ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಪರಿಸರ ಮತ್ತು ನೈಸರ್ಗಿಕ ಸ್ನೇಹಿತವಾದ ಉತ್ಪನ್ನಗಳು ಮಾರಾಟ ಮಾಡಲಾಗುತ್ತಿದ್ದು, ಇನ್ನು ಹೆಚ್ಚಿನ ಜನರು ಈ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿ ಖಾದಿ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೊದ್ಯೋಗ ಮಂಡಳಿಯ ಕೊಪ್ಪಳ ಜಿಲ್ಲಾ ಕಚೇರಿ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande