ರಿಮ್ಸ್ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ಉಪ ಲೋಕಾಯುಕ್ತರು
ರಾಯಚೂರು, 28 ಆಗಸ್ಟ್ (ಹಿ.ಸ.) : ಆ್ಯಂಕರ್ : ಉಪ ಲೋಕಾಯುಕ್ತರಾದ ನ್ಯಾ.ಬಿ ವೀರಪ್ಪ ಅವರು ಆಗಸ್ಟ್ 28ರಂದು ಮಧ್ಯಾಹ್ನ ವೇಳೆ ರಾಯಚೂರಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ರಿಮ್ಸ್)ಯ ಬೋಧಕ ಆಸ್ಪತ್ರೆಗೆ ಭೇಟಿ ನೀಡಿ ತಾಸಿಗು ಹೆಚ್ಚು ಸಮಯ ನಾನಾ ವಾರ್ಡಗಳಿಗೆ ತೆರಳಿ ಪರಿಶೀಲಿಸಿದರು. ಆಸ್ಪತ್ರೆಯ ಪ್ರಾ
ರಿಮ್ಸ್ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ಉಪ ಲೋಕಾಯುಕ್ತರು


ರಿಮ್ಸ್ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ಉಪ ಲೋಕಾಯುಕ್ತರು


ರಿಮ್ಸ್ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ಉಪ ಲೋಕಾಯುಕ್ತರು


ರಾಯಚೂರು, 28 ಆಗಸ್ಟ್ (ಹಿ.ಸ.) :

ಆ್ಯಂಕರ್ : ಉಪ ಲೋಕಾಯುಕ್ತರಾದ ನ್ಯಾ.ಬಿ ವೀರಪ್ಪ ಅವರು ಆಗಸ್ಟ್ 28ರಂದು ಮಧ್ಯಾಹ್ನ ವೇಳೆ ರಾಯಚೂರಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ರಿಮ್ಸ್)ಯ ಬೋಧಕ ಆಸ್ಪತ್ರೆಗೆ ಭೇಟಿ ನೀಡಿ ತಾಸಿಗು ಹೆಚ್ಚು ಸಮಯ ನಾನಾ ವಾರ್ಡಗಳಿಗೆ ತೆರಳಿ ಪರಿಶೀಲಿಸಿದರು.

ಆಸ್ಪತ್ರೆಯ ಪ್ರಾಂಗಣದಲ್ಲಿ, ಅಡ್ಡಾಡುವ ಸ್ಥಳದಲ್ಲಿ ರೋಗಿಗಳು ಎಲ್ಲೆಂದರಲ್ಲಿ ಕುಳಿತಿರುವುದನ್ನು ನೋಡಿದರು. ರೋಗಿಗಳಿಗೆ ಸರದಿ ಸಾಲು ಮಾಡದೇ ಚಿಕಿತ್ಸೆ ಕೊಡುತ್ತಿರುವುದನ್ನು ಕಂಡರು.

ಈ ಅಶಿಸ್ತು ಸರಿಯಲ್ಲ. ಆಸ್ಪತ್ರೆಯಲ್ಲಿ ಶಿಸ್ತು ಮತ್ತು ಸ್ವಚ್ಛತೆ ಕಾಪಾಡಿ ಎಂದು ಉಪ ಲೋಕಾಯುಕ್ತರು ಸೂಚನೆ ನೀಡಿದರು.

ಬಳಿಕ ಉಪ ಲೋಕಾಯುಕ್ತರು, ಮೊದಲಿಗೆ ಎಂ.ಆರ್.ಐ ಸ್ಕ್ಯಾನ್ ಯಂತ್ರದ ಕೊಠಡಿ ಹಾಗೂ 600 ಎಮ್‍ಎ ಕ್ಷ-ಕಿರಣ ಯಂತ್ರ ಮತ್ತು ಐಐಟಿವಿ ಕೇಂದ್ರಕ್ಕೆ ಭೇಟಿ ನೀಡಿ ಯಂತ್ರಗಳ ವೀಕ್ಷಣೆ ನಡೆಸಿ ಯಂತ್ರಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು.

ಬಳಿಕ ಮೂರನೇ ಮಹಡಿಗೆ ತೆರಳಿ ಮಕ್ಕಳ ತೀವ್ರ ನಿಗಾ ಘಟಕ, ಡೈಯಾಲಿಸಸ್ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ನಾಲ್ಕನೇ ಮಹಡಿಗೆ ತೆರಳಿ ಅಲ್ಲಿನ ಶುಚಿತ್ವದ ಬಗ್ಗೆ ಪರಿಶೀಲಿಸಿದರು. ಇದೆ ವೇಳೆ ಬಾಣಂತಿಯರ ವಿಭಾಗಕ್ಕೆ ಭೇಟಿ ಅವರ ಯೋಗಕ್ಷೇಮ ವಿಚಾರಿಸಿದರು. ಔಷಧಿ ಇಲ್ಲಿಯೇ ಕೊಡ್ತಾರಾ? ಹೊರಗಡೆ ಔಷಧಿ ಬರೆದು ಕೊಡ್ತಾರಾ? ಎಂದು ಆಸ್ಪತ್ರೆಯಲ್ಲಿನ ಔಷಧೋಪಚಾರದ ಬಗ್ಗೆ ಪರಿಶೀಲಿಸಿದರು.

ಬಾಣಂತಿಯರಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಅವರನ್ನು ಸರಿಯಾಗಿ ಆರೈಕೆ ಮಾಡಬೇಕು. ಅವರಿಗೆ ಸಿಗುವ ಸೌಲಭ್ಯಗಳನ್ನು ತಪ್ಪದೆ ದೊರಕಿಸಲು ಕ್ರಮ ವಹಿಸಬೇಕು ಎಂದು ಉಪ ಲೋಕಾಯುಕ್ತರು ಇದೆ ವೇಳೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ಉಪ ಲೋಕಾಯುಕ್ತರು, ಸ್ತ್ರೀರೋಗ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ಚಿಕಿತ್ಸೆಯ ಬಗ್ಗೆ ರೋಗಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡರು.

ಒಬಿಜಿ ವಾರ್ಡ ನೋಡಿ ಬಳಿಕ ಮಹಿಳೆಯರ ಹೆರಿಗೆ ಹೆಚ್ಚಿನ ನಿಗಾ ಘಟಕಕ್ಕೆ ತೆರಳಿ, ಮಗು ಆರಾಮಿದೆಯಾ? ಎಂದು ಕೇಳಿ ಸರಿಯಾಗಿ ಊಟ ಮಾಡಿ ಎಂದು ಸಲಹೆ ಮಾಡಿ ತಾಯಂದಿರೊಂದಿಗೆ ಆತ್ಮೀಯವಾಗಿ ಮಾತನಾಡಿದರು.

ಬಳಿಕ ಮಕ್ಕಳ ವಾರ್ಡ್ ಮತ್ತು ಎನ್.ಆರ್.ಸಿ ವಾರ್ಡ್ ಗೆ ಭೇಟಿ ನೀಡಿ ಮಕ್ಕಳಿಗೆ ಕೊಡುವ ಆರೋಗ್ಯ ಸೌಕರ್ಯಗಳ ಬಗ್ಗೆ ಪರೀಕ್ಷಿಸಿದರು.

ಬಳಿಕ, ಪೌಷ್ಠಿಕ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ನೀಡುವ ಔಷಧಿ, ಅದರ ಕಾಲಾವಧಿಯ ದಿನಾಂಕ ಪರಿಶೀಲಿಸಿದರು.

ನಂತರ ಐದನೆಯ ಮಹಡಿಯ ಪುರುಷ ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿ ವಾರ್ಡ್‍ನಲ್ಲಿ ದಾಖಲಾದ

ಯಾದಗಿರಿ ಜಿಲ್ಲೆಯ ಕೋಳೂರ ಗ್ರಾಮದ ನಿವಾಸಿ ತಿಮ್ಮಪ್ಪ ಅವರೊಂದಿಗೆ ಚಿಕಿತ್ಸೆಯ ಬಗ್ಗೆ ಕೇಳಿದರು.

ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕು ನಿರ್ಲಕ್ಷ್ಯ ಮಾಡಬಾರದು. ಆಸ್ಪತ್ರೆಯಲ್ಲಿನ ತಜ್ಞ ವೈದ್ಯರು, ವೈದ್ಯಾಧಿಕಾರಿಗಳು, ಆಡಳಿತ ವರ್ಗ ಮತ್ತು ಆರೋಗ್ಯ ಸಿಬ್ಬಂದಿಯ ಬಗ್ಗೆ ದೂರುಗಳು ಕೇಳಿ ಬಂದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಇದೆ ವೇಳೆ ಉಪ ಲೋಕಾಯುಕ್ತರು ಎಚ್ಚರಿಕೆ ನೀಡಿದರು.

ಈ ವೇಳೆ ರಿಮ್ಸ್ ನಿರ್ದೇಶಕರಾದ ಡಾ.ರಮೇಶಕುಮಾರ ಬಿ.ಕೆ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು, ಜಿಲ್ಲಾ ಸರ್ಜನ್ ಡಾ.ವಿಜಯಶಂಕರ ಹಾಗೂ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande