ಮನಗೂಳಿ ಕೆನರಾ ಬ್ಯಾಂಕ್ ಎದುರು ಗ್ರಾಹಕರ ಪ್ರತಿಭಟನೆ
ವಿಜಯಪುರ, 28 ಆಗಸ್ಟ್ (ಹಿ.ಸ.) : ಆ್ಯಂಕರ್ : ಗ್ರಾಹಕರಿಗೆ ಬಂಗಾರದ ಬೆಲೆ ನೀಡುವಲ್ಲಿ ಬ್ಯಾಂಕ್ ಅಧಿಕಾರಿಗಳ ತಾರತಮ್ಯ ಖಂಡಿಸಿ ಬ್ಯಾಂಕ್‌ಗೆ ಗ್ರಾಹಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಮನಗೂಳಿ ಕೆನರಾ ಬ್ಯಾಂಕ್ ಎದುರು ನಡೆದಿದೆ.‌ ವಿಜಯಪುರ ಜಿಲ್ಲೆಯ ಮನಗೂಳಿ ಕೆನರಾ ಬ್
ದರೋಡೆ


ವಿಜಯಪುರ, 28 ಆಗಸ್ಟ್ (ಹಿ.ಸ.) :

ಆ್ಯಂಕರ್ : ಗ್ರಾಹಕರಿಗೆ ಬಂಗಾರದ ಬೆಲೆ ನೀಡುವಲ್ಲಿ ಬ್ಯಾಂಕ್ ಅಧಿಕಾರಿಗಳ ತಾರತಮ್ಯ ಖಂಡಿಸಿ ಬ್ಯಾಂಕ್‌ಗೆ ಗ್ರಾಹಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಮನಗೂಳಿ ಕೆನರಾ ಬ್ಯಾಂಕ್ ಎದುರು ನಡೆದಿದೆ.‌

ವಿಜಯಪುರ ಜಿಲ್ಲೆಯ ಮನಗೂಳಿ ಕೆನರಾ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಗ್ರಾಹಕರು ಏಕಾಏಕಿ ಕೆನರಾ ಬ್ಯಾಂಕ್‌‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಕಳ್ಳತನವಾದ ಬಂಗಾರದ ಇವತ್ತಿನ ಮಾರುಕಟ್ಟೆ ದರ ನೀಡುವಂತೆ ಗ್ರಾಹಕರು ಬೇಡಿಕೆ ಇಟ್ಟರು.‌ ಗ್ರಾಹಕರಿಗೆ ಬಂಗಾರದ ಬೆಲೆ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸಿದರು.

ಗ್ರಾಹಕರಿಗೆ ಕೋಟಿಗಟ್ಟಲೆ ಹಣ ವಂಚನೆ ಆಗುತ್ತದೆ.‌ ರಾಜ್ಯದಲ್ಲಿ ಅತೀ ದೊಡ್ಡ ಚಿನ್ನಾಭರಣ ಕಳ್ಳತನ ಇದೆ ಬ್ಯಾಂಕ್‌ನಲ್ಲಿ 2025 ಮೇ 23 ರಿಂದ ಮೇ 25ರ ಮಧ್ಯೆ ನಡೆದಿತ್ತು. ಒಟ್ಟು 15 ಜನ ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ವಿಜಯಪುರ ಪೊಲೀಸರು ಭೇದಿಸಿದ್ದರು.

ಬಂಧಿತ ಆರೋಪಿಗಳಿಂದ 39ಕೆಜಿ ಬಂಗಾರದ ಆಭರಣ 1.16ಕೋಟಿ ನಗದು, ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನ 39.26ಕೋಟಿ ಮೌಲ್ಯದ ವಸ್ತುಗಳು ಜಪ್ತಿ ಮಾಡಿದ್ದರು. ಅದಕ್ಕಾಗಿ ಗ್ರಾಹಕರು ಹೆಚ್ಚಿನ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande