ಸೆ.3 ರಂದು ರೈಲು ಸಂಚಾರದಲ್ಲಿ ಬದಲಾವಣೆ
ಹುಬ್ಬಳ್ಳಿ, 28 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಹಾಗೂ ತೋರಣಗಲ್ಲು ಯಾರ್ಡ್‌ಗಳಲ್ಲಿ ಥಿಕ್ ವೆಬ್ ಸ್ವಿಚ್ ಕಾಮಗಾರಿಯ ಹಿನ್ನೆಲೆಯಲ್ಲಿ ದಕ್ಷಿಣ ಪಶ್ಚಿಮ ರೈಲ್ವೆ ಲೈನ್ ಬ್ಲಾಕ್ ಕೈಗೊಂಡಿದ್ದು, ಸೆಪ್ಟೆಂಬರ್ 3, 2025ರಂದು ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ. ಈ ಕುರಿತು ರೈಲ್ವೆ ಇಲಾಖೆ
ಸೆ.3 ರಂದು ರೈಲು ಸಂಚಾರದಲ್ಲಿ ಬದಲಾವಣೆ


ಹುಬ್ಬಳ್ಳಿ, 28 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಹಾಗೂ ತೋರಣಗಲ್ಲು ಯಾರ್ಡ್‌ಗಳಲ್ಲಿ ಥಿಕ್ ವೆಬ್ ಸ್ವಿಚ್ ಕಾಮಗಾರಿಯ ಹಿನ್ನೆಲೆಯಲ್ಲಿ ದಕ್ಷಿಣ ಪಶ್ಚಿಮ ರೈಲ್ವೆ ಲೈನ್ ಬ್ಲಾಕ್ ಕೈಗೊಂಡಿದ್ದು, ಸೆಪ್ಟೆಂಬರ್ 3, 2025ರಂದು ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ.

ಈ ಕುರಿತು ರೈಲ್ವೆ ಇಲಾಖೆ ಪ್ರಕಟಣೆಯ ಬಿಡುಗಡೆ ಮಾಡಿದ್ದು, ಗುಂತಕಲ್–ಚಿಕ್ಕಜಾಜೂರು ಪ್ಯಾಸೆಂಜರ್ (57415), ಚಿಕ್ಕಜಾಜೂರು–ಗುಂತಕಲ್ ಪ್ಯಾಸೆಂಜರ್ (57416) ಹಾಗೂ ಹೊಸಪೇಟೆ–ಬಳ್ಳಾರಿ ಡೆಮು ವಿಶೇಷ (07397) ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಇದರೊಂದಿಗೆ, ತಿರುಪತಿ–ಕದಿರಿದೇವರಪಳ್ಳಿ ಪ್ಯಾಸೆಂಜರ್ (57405) ಗುಂತಕಲ್ ನಲ್ಲಿ ಕೊನೆಗೊಳ್ಳಲಿದ್ದು, ಕದಿರಿದೇವರಪಳ್ಳಿ–ತಿರುಪತಿ ಪ್ಯಾಸೆಂಜರ್ (57406) ಗುಂತಕಲ್ ನಿಂದ ಪ್ರಾರಂಭವಾಗಲಿದೆ. ಬಳ್ಳಾರಿ–ದಾವಣಗೆರೆ ಡೆಮು ವಿಶೇಷ (07395) ಹೊಸಪೇಟೆಯಿಂದ ಮಾತ್ರ ಸಂಚರಿಸಲಿದೆ. ಇದೇ ರೀತಿ ಹುಬ್ಬಳ್ಳಿ–ಗುಂತಕಲ್ ಪ್ಯಾಸೆಂಜರ್ (56911) ಮುನಿರಾಬಾದ್‌ನಲ್ಲಿ ಕೊನೆಗೊಳ್ಳಲಿದ್ದು, ಗುಂತಕಲ್–ಹುಬ್ಬಳ್ಳಿ ಪ್ಯಾಸೆಂಜರ್ (56912) ಕೂಡ ಮುನಿರಾಬಾದ್‌ನಿಂದಲೇ ಹೊರಡಲಿದೆ.

ಹಾಗೆಯೇ, ಸೆ.3ರಂದು ಹುಬ್ಬಳ್ಳಿ–ತಿರುಪತಿ ಪ್ಯಾಸೆಂಜರ್ (57402) ರೈಲು ಮಾರ್ಗಮಧ್ಯೆ 90 ನಿಮಿಷಗಳ ತಡವಾಗಿ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande