ಸೆ.1 ರಂದು ಮಹಿಳಾ ದಸರಾ ಪೂರ್ವಭಾವಿ ಸಭೆ
ಶಿವಮೊಗ್ಗ, 27 ಆಗಸ್ಟ್ (ಹಿ.ಸ.): ಆ್ಯಂಕರ್:ಶಿವಮೊಗ್ಗ ಮಹಾನಗರಪಾಲಿಕೆ ಮಹಿಳಾ ದಸರಾ ಸಮಿತಿ ವತಿಯಿಂದ ಮಹಿಳಾ ದಸರಾ-2025 ರ ಅಂಗವಾಗಿ ಸಾಂಸ್ಕೃತಿ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಶಿವಮೊಗ್ಗ ನಗರದ ವಿವಿಧ ಮಹಿಳಾ ಸಂಘಗಳು ಹಾಗೂ ಸ್ಥಳಿಯ ಸಂಸ್ಥೆಗಳಿಂದ ಸೆ.1 ರಂದು ಬೆಳಿಗ್ಗೆ 11 ಗಂಟೆಗೆ ಪಾಲಿಕೆಯ ಪರಿಷತ್
ಸೆ.1 ರಂದು ಮಹಿಳಾ ದಸರಾ ಪೂರ್ವಭಾವಿ ಸಭೆ


ಶಿವಮೊಗ್ಗ, 27 ಆಗಸ್ಟ್ (ಹಿ.ಸ.):

ಆ್ಯಂಕರ್:ಶಿವಮೊಗ್ಗ ಮಹಾನಗರಪಾಲಿಕೆ ಮಹಿಳಾ ದಸರಾ ಸಮಿತಿ ವತಿಯಿಂದ ಮಹಿಳಾ ದಸರಾ-2025 ರ ಅಂಗವಾಗಿ ಸಾಂಸ್ಕೃತಿ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಶಿವಮೊಗ್ಗ ನಗರದ ವಿವಿಧ ಮಹಿಳಾ ಸಂಘಗಳು ಹಾಗೂ ಸ್ಥಳಿಯ ಸಂಸ್ಥೆಗಳಿಂದ ಸೆ.1 ರಂದು ಬೆಳಿಗ್ಗೆ 11 ಗಂಟೆಗೆ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ.

ಸೆ.24 ರಂದು ಕುವೆಂಪು ರಂಗಮಂದಿರಲ್ಲಿ ಮಹಿಳಾ ದಸರಾದ ಸಮಾರೋಪ ಸಮಾರಂಭ ಹಾಗೂ ಶಿವಮೊಗ್ಗ ನಗರದ ವಿವಿಧ ಮಹಿಳಾ ಸಂಘಗಳು ಹಾಗೂ ಸ್ಥಳಿಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ.

ಸೆ.10 ರಂದು ನಗರದ ವೀರಶೈವ ಕಲ್ಯಾಣ ಮಂದಿರ ಮತ್ತು ನಿಜಲಿಂಗಪ್ಪ ಸಭಾಭವನ ಆವರಣದಲ್ಲಿ ಮಹಿಳೆಯರಿಗಾಗಿ ವೈಕ್ತಿಕಕ ಸ್ಪರ್ಧೆಗಳಾದ ಕಡ್ಡಿಯಲ್ಲಿ ಬಳೆತೆಗೆದು ಹಾಕುವುದು, ಬೆಂಕಿ ಪೊಟ್ಟಣದ ಕಡ್ಡಿಯಲ್ಲಿ ಎಬಿಸಿಡಿ ಜೋಡಿಸುವುದು, ಕೇಶಾಲಂಕಾರ ಸ್ಪರ್ಧೆ, ಉರಗ ನಡಿಗೆ ಸ್ಪರ್ಧೆ, ಗುಂಪು ಸ್ಪರ್ಧೆಗಳಾದ ದುರ್ಗಾದೇವಿ ಅಲಂಕಾರ, ಬಾಲ್‌ಪಾಸ್ ಮಾಡುವುದು, ಅಂತ್ಯಾಕ್ಷರಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಅ.16 ರಂದು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ಸಲುವಾಗಿ ಮಿಷನ್ ಸುರಕ್ಷಾ ಅಡಿಯಲ್ಲಿ ವಿವಿಧ ಇಲಾಖೆಯ ಮಹಿಳಾ ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಬೃಹತ್ ಮಹಿಳಾ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಾಥಾದಲ್ಲಿ ವಿಶೇಷ ತೊಡುಗೆ ತೊಟ್ಟು ಬಂದಲ್ಲಿ ವಿಶೇಷ ಬಹುಮಾನ ನೀಡಲಾಗುತ್ತದೆ. ಹಾಗೂ ಸಂ ಫ್ರಂ ಸ್ವ (ಸಂಸಾರವೇ ಸ್ವರ್ಗ) ಎಂಬ ಕುಟುಂಬದ ಐದು ಜನ ಸದಸ್ಯರನ್ನೊಳಗೊಂಡ ವಿಶೇಷ ಸ್ವರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಮುದಾಯ ವ್ಯವಹಾರಿಕ ಅಧಿಕಾರಿ ಹಾಗೂ ಮಹಿಳಾ ದಸರಾ ಸಮಿತಿ-2025 ರ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande