ರಾಯಚೂರು : ಉಪ ಲೋಕಾಯುಕ್ತರ ಪ್ರವಾಸ ; ಸುವ್ಯವಸ್ಥಿತ ಪ್ರಚಾರ
ರಾಯಚೂರು, 27 ಆಗಸ್ಟ್ (ಹಿ.ಸ.) : ಆ್ಯಂಕರ್ : ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರು ಆಗಸ್ಟ್ 28 ರಿಂದ ಆಗಸ್ಟ್ 30ರವರೆಗೆ ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮಹಾನಗರ ಪಾಲಿಕೆ ಸೇರಿದಂತೆ ಇಲಾಖೆಗಳ ಸಹಯೋಗದಲ್ಲಿ ಪ್ರಚಾರ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸುತ್ತಿದ
ರಾಯಚೂರು :  ಉಪ ಲೋಕಾಯುಕ್ತರ ಪ್ರವಾಸ: ಸುವ್ಯವಸ್ಥಿತ ಪ್ರಚಾರ


ರಾಯಚೂರು :  ಉಪ ಲೋಕಾಯುಕ್ತರ ಪ್ರವಾಸ: ಸುವ್ಯವಸ್ಥಿತ ಪ್ರಚಾರ


ರಾಯಚೂರು :  ಉಪ ಲೋಕಾಯುಕ್ತರ ಪ್ರವಾಸ: ಸುವ್ಯವಸ್ಥಿತ ಪ್ರಚಾರ


ರಾಯಚೂರು :  ಉಪ ಲೋಕಾಯುಕ್ತರ ಪ್ರವಾಸ: ಸುವ್ಯವಸ್ಥಿತ ಪ್ರಚಾರ


ರಾಯಚೂರು, 27 ಆಗಸ್ಟ್ (ಹಿ.ಸ.) :

ಆ್ಯಂಕರ್ : ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರು ಆಗಸ್ಟ್ 28 ರಿಂದ ಆಗಸ್ಟ್ 30ರವರೆಗೆ ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮಹಾನಗರ ಪಾಲಿಕೆ ಸೇರಿದಂತೆ ಇಲಾಖೆಗಳ ಸಹಯೋಗದಲ್ಲಿ ಪ್ರಚಾರ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸುತ್ತಿದೆ.

ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರು ಆಗಸ್ಟ್ 28 ರಿಂದ 30ರವರೆಗೆ ಸಾರ್ವಜನಿಕ ಅಹವಾಲು, ಕುಂದುಕೊರತೆ, ದೂರು ವಿಚಾರಣೆ ಹಾಗೂ ಬಾಕಿ ಇರುವ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಎನ್ನುವ ಬ್ಯಾನರ್‌ನ್ನು ರಾಯಚೂರ ಸಿಟಿ ಸೇರಿದಂತೆ ಜಿಲ್ಲೆಯಾದ್ಯಂತ ಜನನಿಬಿಡ ಸ್ಥಳಗಳಲ್ಲಿ ಅವಳಡಿಸಿ ವ್ಯಾಪಕ ಪ್ರಚಾರ ನಡೆಸಲಾಗುತ್ತಿದೆ.

ಕಾರ್ಯಕ್ರಮ ನಡೆಯುವ ಸ್ಥಳವಾದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ, ಜಿಲ್ಲಾ ಮಹಾತ್ಮ ಗಾಂಧೀ ಜಿಲ್ಲಾ ಕ್ರೀಡಾಂಗಣ, ಎಪಿಎಂಸಿ ಕಚೇರಿ, ಬಸವನಬಾವಿ ಸರ್ಕಲ್, ಕೆಕೆಆರ್‌ಟಿಸಿ ಡಿಪೊ, ತೀನ್ ಕಂದಿಲ್, ಆರ್‌ಟಿಓ ಕಚೇರಿ, ಯಕ್ಲಾಸಪುರದ ಜಿಲ್ಲಾಡಳಿತ ಭವನ, ಹೈದ್ರಾಬಾದ್ ರೋಡನ ಜಿಲ್ಲಾಸ್ಪತ್ರೆ, ಹಳೆಯ ಡಿಸಿ ಆಫೀಸ್ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಬ್ಯಾನರ್ ಅಳವಡಿಸಿ ಉಪ ಲೋಕಾಯುಕ್ತರ ಕಾರ್ಯಕ್ರಮಕ್ಕೆ ಪ್ರಚಾರ ನಡೆಸಲಾಗುತ್ತಿದೆ.

ಸಾರ್ವಜನಿಕ ಅಹವಾಲು, ಕುಂದುಕೊರತೆ, ದೂರು ವಿಚಾರಣೆ ಹಾಗೂ ಬಾಕಿ ಇರುವ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗಿಯಾಗಲು ಅನುಕೂಲವಾಗುವಂತೆ ರಾಯಚೂರು ಸಿಟಿಯ ಆಯಾ ಕಚೇರಿಗಳ ಮುಂದಗಡೆಯು ಸಹ ಬ್ಯಾನರ್ ಅಳವಡಿಸಿ ಪ್ರಚಾರ ನಡೆಸಲಾಗುತ್ತಿದೆ.

ಧ್ವನಿವರ್ಧಕ ಮೂಲಕ ಪ್ರಚಾರ:

ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರು ರಾಯಚೂರಿಗೆ ಆಗಮಿಸಿ ಸಾರ್ವಜನಿಕ ಅಹವಾಲು ಸ್ವೀಕಾರ ನಡೆಸಲಿದ್ದಾರೆ ಎನ್ನುವ ಸಂದೇಶವನ್ನು ಜನತೆಗೆ ರವಾನಿಸಲು ಧ್ವನಿವರ್ಧಕ ಬಳಸಿ ಮಹಾನಗರ ಪಾಲಿಕೆಯ ಕಸವಿಲೇವಾರಿ ವಾಹನಗಳಿಂದಲು ಸಹ ಪ್ರಚಾರ ನಡೆಸಲಾಗಿದೆ.

ಪ್ರಚಾರ ಸಮಿತಿಯಲ್ಲಿನ ಜಿಲ್ಲಾ ಪಂಚಾಯತ್ ಸಿಇಓ ಅವರು, ಮಹಾನಗರ ಪಾಲಿಕೆಯ ಆಯುಕ್ತರು, ವಾರ್ತಾ ಇಲಾಖೆಯ ಅಧಿಕಾರಿಗಳು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಈ ಪ್ರಚಾರ ಕಾರ್ಯದ ಉಸ್ತುವಾರಿ ವಹಿಸಿರುತ್ತಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande