ಉಪ ಲೋಕಾಯುಕ್ತ ನ್ಯಾ. ಬಿ ವೀರಪ್ಪ ಅವರಿಂದ ಆಗಸ್ಟ್ 28ರಂದು ಅನಿರೀಕ್ಷಿತ ಭೇಟಿ
ರಾಯಚೂರು, 27 ಆಗಸ್ಟ್ (ಹಿ.ಸ.) : ಆ್ಯಂಕರ್ : ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರು ಪೂರ್ವ ನಿಗದಿಯಂತೆ ಆಗಸ್ಟ್ 28ರಂದು ರಾಯಚೂರ ಪ್ರವಾಸದ ವೇಳೆ ನಿರೀಕ್ಷಿತ ಭೇಟಿ ನೀಡಲಿದ್ದಾರೆ. ಆಗಸ್ಟ್ 27ರಂದು ರಾತ್ರಿ 8.40ಕ್ಕೆ ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಿಂದ ಉದ್ಯಾನ ಎಕ್ಸಪ್ರೆಸ್ ರೈಲು ಮೂಲಕ ಹೊರ
ಉಪ ಲೋಕಾಯುಕ್ತ ನ್ಯಾ. ಬಿ ವೀರಪ್ಪ ಅವರಿಂದ ಆಗಸ್ಟ್ 28ರಂದು ಅನಿರೀಕ್ಷಿತ ಭೇಟಿ


ರಾಯಚೂರು, 27 ಆಗಸ್ಟ್ (ಹಿ.ಸ.) :

ಆ್ಯಂಕರ್ : ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರು ಪೂರ್ವ ನಿಗದಿಯಂತೆ ಆಗಸ್ಟ್ 28ರಂದು ರಾಯಚೂರ ಪ್ರವಾಸದ ವೇಳೆ ನಿರೀಕ್ಷಿತ ಭೇಟಿ ನೀಡಲಿದ್ದಾರೆ.

ಆಗಸ್ಟ್ 27ರಂದು ರಾತ್ರಿ 8.40ಕ್ಕೆ ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಿಂದ ಉದ್ಯಾನ ಎಕ್ಸಪ್ರೆಸ್ ರೈಲು ಮೂಲಕ ಹೊರಟು ಆಗಸ್ಟ್ 28ರ ಬೆಳಿಗ್ಗೆ 4.13ಕ್ಕೆ ರಾಯಚೂರು ನಗರಕ್ಕೆ ಆಗಮಿಸುವರು.

ಅಲ್ಲಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಹೊಸ ಅತಿಥಿ ಗೃಹಕ್ಕೆ ತೆರಳಿ ಬೆಳಗ್ಗೆ 6.30ಕ್ಕೆ ಚಹಾ ಸೇವನೆ ನಂತರ ಅನಿರೀಕ್ಷಿತ ಭೇಟಿ ಕಾರ್ಯಕ್ರಮ ಆರಂಭಿಸುವರು. 9 ಗಂಟೆಗೆ ಉಪಹಾರ ಸೇವನೆ ಬಳಿಕ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30ರವರೆಗೆ ನಗರದ ಕೆಲವೆಡೆ ಅನಿರೀಕ್ಷಿತ ಭೇಟಿ ಮುಂದುವರೆಸುವರು.

ಊಟದ ವಿರಾಮದ ನಂತರ ಮಧ್ಯಾಹ್ನ 2.30 ರಿಂದ ಮತ್ತೆ ನಾನಾ ಪ್ರದೇಶಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಕೃಷಿ ವಿವಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande