ಸಿರುಗುಪ್ಪ, 27 ಆಗಸ್ಟ್ (ಹಿ.ಸ.) :
ಆ್ಯಂಕರ್ : ತೆಕ್ಕಲಕೋಟೆ ಕಂಬಾಳಿ ಬೃಹನ್ಮಠದ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು (70) ಬುಧವಾರ ನಸುಕಿನಲ್ಲಿ ಲಿಂಗೈಕ್ಯರಾಗಿದ್ದಾರೆ.
ತೆಕ್ಕಲಕೋಟೆಯ ತೆಕ್ಕಲಕೋಟೆಯ ಕಂಬಾಳಿ ಬೃಹನ್ಮಠದ ಹೊಸಮಠದಲ್ಲಿ ಬುಧವಾರ ಸಂಜೆ 4 ಗಂಟೆಯಿಂದ ಕ್ರಿಯಾಸಮಾಧಿಯ ಕ್ರಿಯೆಗಳು ಪ್ರಾರಂಭವಾಗಲಿವೆ.
ಶ್ರೀಗಳ ಅಂತ್ಯಕ್ರಿಯೆಯ ಸಂದರ್ಭದಲ್ಲಿ ವೀರಶೈವ ಸಮಾಜದ ಗಣ್ಯಮಾನ್ಯರು, ಗುರು - ಹಿರಿಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದು, ವೀರಶೈವ ವಿಧಿ ವಿಧಾನಗಳ ಪ್ರಕಾರ ನೆರವೇರಿಸಲಾಗುತ್ತದೆ ಎಂದು ಶ್ರೀಮಠದ ಭಕ್ತಾದಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್