ಸಹಕಾರ ಇಲಾಖೆ ವತಿಯಿಂದ ವಿಶೇಷ ತರಬೇತಿ ಶಿಬಿರ
ಗದಗ, 27 ಆಗಸ್ಟ್ (ಹಿ.ಸ.) : ಆ್ಯಂಕರ್ : ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಹಾಗೂ ಕೆ.ಸಿ.ಸಿ.ಬ್ಯಾಂಕ್ ಲಿ., ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ
ಫೋಟೋ


ಗದಗ, 27 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಹಾಗೂ ಕೆ.ಸಿ.ಸಿ.ಬ್ಯಾಂಕ್ ಲಿ., ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಒಬ್ಬ ನಿರ್ದೇಶಕರುಗಳಿಗೆ ವಿಶೇಷ ತರಬೇತಿ ಶಿಬಿರ ದಿನಾಂಕ: 28.08.2025 ಗುರುವಾರ ರಂದು ಬೆಳಿಗ್ಗೆ 10 ಘಂಟೆಗೆ ದಿ ಕೆ.ಸಿ.ಸಿ ಬ್ಯಾಂಕ್ ಲಿ., ರೋಣ ಇದರ ಸಭಾಭವನ ತಾ.ರೋಣ ಜಿ.ಗದಗದಲ್ಲಿ ಜರುಗಲಿದೆ.

ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರಾದ ಸಿ.ಎಂ.ಪಾಟೀಲ ರವರು ವಹಿಸುವರು. ಉದ್ಘಾಟನೆಯು ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷರು ಹಾಗೂ ಕೆ.ಸಿ.ಸಿ ಬ್ಯಾಂಕ್ ಲಿ., ಧಾರವಾಡ ಇದರ ನಿರ್ದೇಶಕರಾದ ಜಿ. ಪಿ. ಪಾಟೀಲ ಇವರಿಂದ ಜರುಗುವುದು.

ಕೆ.ಸಿ.ಸಿ ಬ್ಯಾಂಕ್ ಲಿ., ಧಾರವಾಡ ಇದರ ನಿರ್ದೇಶಕರಾದ ಸಿ. ಬಿ. ದೊಡ್ಡಗೌಡ್ರ, ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರಾದ ಸುರೇಶಗೌಡ ಎಂ. ಪಾಟೀಲ, ಗದಗ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕಿಯರಾದ ಶ್ರೀಮತಿ ಎಸ್. ಎಸ್. ಕಬಾಡೆ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಗದಗ ಉಪನಿರ್ದೇಶಕರಾದ ಅರವಿಂದ ಎನ್. ನಾಗಜ್ಜನವರ, ಸಹಕಾರ ಸಂಘಗಳ ಸಹಾಯಕ ನಿಬಂಧಕಿಯರಾದ ಶ್ರೀಮತಿ ಪುಷ್ಪಾ ಕೆ. ಕಡಿವಾಳ, ರೋಣ ತಾಲೂಕಿನ ಸಹಕಾರ ಅಭಿವೃಧ್ಧಿ ಅಧಿಕಾರಿಗಳಾದ ಪ್ರಶಾಂತ ಮುಧೋಳ, ಗದಗ ಕೆ.ಸಿ.ಸಿ. ಬ್ಯಾಂಕಿನ ಜಿಲ್ಲಾ ನಿಯಂತ್ರಣಾಧಿಕಾರಿಗಳಾದ ಸುನೀಲ ಚಳಗೇರಿ, ಕೆ.ಸಿ.ಸಿ. ಬ್ಯಾಂಕ್ ಲಿ., ರೋಣ ಇದರ ಹಿರಿಯ ಹಾಗೂ ಕಿರಿಯ ಬ್ಯಾಂಕ್ ನಿರೀಕ್ಷಕರುಗಳಾದ ಎ. ಎ. ಶಾಬಾದಿ, ಜಿ. ಪಿ. ರಾಠೋಡ, ಎಂ.ಬಿ.ಪೂಜಾರಿ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸುವರು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಚಂದ್ರಶೇಖರ ಎಸ್. ಕರಿಯಪ್ಪನವರ ತಿಳಿಸಿದ್ದಾರೆ.

ತರಬೇತಿ ಕಾರ್ಯಾಗಾರದಲ್ಲಿ “ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಆಡಳಿತ ನಿರ್ವಹಣೆ” ಕುರಿತು, ಸಚಿನ ಎಸ್. ಮುರಗುಂಡಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಹನಗಂಡಿ, “ಸಭೆಗಳು ಹಾಗೂ ಸಭೆಗಳಲ್ಲಿನ ಪ್ರಕಾರಗಳ” ಕುರಿತು. ಹಾಗೂ “ಸಾಲ ತರುವುದು, ವಿತರಿಸುವುದು, ವಸೂಲಿ ಹಾಗೂ ಸಂಬ0ಧಿಸಿದ ಬ್ಯಾಂಕಿಗೆ ಮರುಪಾವತಿಸುವ” ಕುರಿತು, ರೋಣ ತಾಲೂಕಿನ ಸಹಕಾರಿ ಅಭಿವೃಧ್ಧಿ ಅಧಿಕಾರಿಗಳಾದ ಪ್ರಶಾಂತ ಮುಧೋಳ ಇವರು ಉಪನ್ಯಾಸ ನೀಡುವರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande