ಕೇಂದ್ರದ ವಿರುದ್ಧ ದೆಹಲಿಯಲ್ಲಿ ಸೆಪ್ಟಂಬರ್ 4 ರಂದು ಪ್ರತಿಭಟನೆ
ಬಳ್ಳಾರಿ, 27 ಆಗಸ್ಟ್ (ಹಿ.ಸ.) : ಆ್ಯಂಕರ್ : ಕೇಂದ್ರ ಸರ್ಕಾರವು ದುಡಿಯುವ ವರ್ಗ ಮತ್ತು ಬಂಡವಾಳ ಶಾಹಿಗಳ ನಡುವೆ ಜಾರಿ ಮಾಡುತ್ತಿರುವ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‍ನಲ್ಲಿ ಆಲ್ ಇಂಡಿಯಾ ಯುನಿಟೆಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ ಸೆಪ್ಟಂಬರ್ 4 ರಂದು ಕೇ
ಕೇಂದ್ರದ ವಿರುದ್ಧ ದೆಹಲಿಯಲ್ಲಿ ಸೆಪ್ಟಂಬರ್ 4 ರಂದು ಪ್ರತಿಭಟನೆ


ಕೇಂದ್ರದ ವಿರುದ್ಧ ದೆಹಲಿಯಲ್ಲಿ ಸೆಪ್ಟಂಬರ್ 4 ರಂದು ಪ್ರತಿಭಟನೆ


ಬಳ್ಳಾರಿ, 27 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕೇಂದ್ರ ಸರ್ಕಾರವು ದುಡಿಯುವ ವರ್ಗ ಮತ್ತು ಬಂಡವಾಳ ಶಾಹಿಗಳ ನಡುವೆ ಜಾರಿ ಮಾಡುತ್ತಿರುವ

ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‍ನಲ್ಲಿ ಆಲ್ ಇಂಡಿಯಾ ಯುನಿಟೆಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ ಸೆಪ್ಟಂಬರ್ 4 ರಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಐಟಿಯುಸಿಯ ಕೆ. ಸೋಮಶೇಖರ್ ಅವರು ತಿಳಿಸಿದ್ದಾರೆ.

ಪತ್ರಕರ್ತರಿಗೆ ಈ ಮಾಹಿತಿ ನೀಡಿದ ಅವರು, ವಿಮಾನ ನಿಲ್ದಾಣ, ಬಂದರು, ವಿದ್ಯುತ್, ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಸೇರಿ ಪ್ರಮುಖ ಸಾರ್ವಜನಿಕ ವಲಯಗಳನ್ನು ಕೇಂದ್ರ ಸರ್ಕಾರ ಖಾಸಗಿಕರಣ ಗೊಳಿಸುತ್ತಿದೆ. ಅಲ್ಲದೇ, 29 ಕಾರ್ಮಿಕ ಪರವಾಗಿದ್ದ ಕಾನೂನುಗಳು ರದ್ದುಗೊಳಿಸಿ 4 ಕಾನೂನುಗಳನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ನಿಯಮ ಮೀರಿ 10 ಗಂಟೆಗಳ ಕೆಲಸ, ಗೃಹಿಣಿಯರಿಗೆ ಮತ್ತು ಯುವತಿಯರಿಗೆ ರಾತ್ರಿಪಾಳಿಯಲ್ಲಿ ಕೆಲಸ ಮಾಡಲು ಕಾಯ್ದೆ ರೂಪಿಸುತ್ತಿದೆ. ಇದರಿಂದ ಕೌಟುಂಬಿಕ ವ್ಯವಸ್ಥೆ ಹಾಳಾಗುವುದೂ ಅಲ್ಲದೇ, ಕಾರ್ಮಿಕರ ಆರೋಗ್ಯ - ದೇಹದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಕನಿಷ್ಠ ವೇತನವನ್ನು ರಾಜ್ಯ ಸರ್ಕಾರ ಜಾರಿಗೊಳಿಸುತ್ತಿಲ್ಲ. ಅವರ ಬೇಡಿಕೆಗಳನ್ನು ಈಡೇರಿಸುವಂತೆ ಪದೇಪದೇ ಪ್ರತಿಭಟನೆಯನ್ನು ಮಾಡುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ದುಡಿಯುವ ವರ್ಗವನ್ನು ಶೋಷಣೆ ಮಾಡುತ್ತಿವೆ. ಬಂಡವಾಳ ಶಾಹಿಗಳಿಗೆ ಅನುಕೂಲವಾಗುವಂತ ಕಾನೂನುಗಳನ್ನು ರೂಪಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೋಮಶೇಖರ ಗೌಡ, ದೇವದಾಸ್, ಎ. ಶಾಂತ, ಡಾ. ಎನ್. ಪ್ರಮೋದ್, ಶರ್ಮಾಸ್ ಸೇರಿ ಹಲವರು ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande