ಗದಗ, 27 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮೈಸೂರು ವಿಶ್ವವಿದ್ಯಾನಿಲಯಕ್ಕೆ ಶಾಶ್ವತ ಸಂಯೋಜನೆಗೊಂಡಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ( ಕಾವಾ), ಸಿದ್ಧಾರ್ಥ ನಗರ, ಮೈಸೂರು ಸಂಸ್ಥೆಯಲ್ಲಿ ಮಾಸ್ಟರ್ ಆಫ್ ವಿಜ್ಯುವಲ್ ಆರ್ಟ್ಸ (ಎಂ.ವಿ.ಎ) (ಎರಡು ಶೈಕ್ಷಣಿಕ ವರ್ಷದ ನಾಲ್ಕು ಸೆಮಿಸ್ಟರ್ ಸಿ.ಬಿ.ಎಸ್.ಸಿ. ಪದ್ಧತಿ) ದೃಶ್ಯ ಕಲೆಯಲ್ಲಿ 2025-26 ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಸ್ನಾತಕೋತ್ತರ ಪದವಿ ಪ್ರವೇಶಾತಿಗಾಗಿ ಬಿ.ವಿ.ಎ. ಸ್ನಾತಕ ಪದವಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಆಫ್‌ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಸ್ನಾತಕೋತ್ತರ ಪದವಿಯಲ್ಲಿ ಚಿತ್ರಕಲೆ ವಿಭಾಗ, ಗ್ರಾಫಿಕ್ಸ್ ವಿಭಾಗ ಮತ್ತು ಶಿಲ್ಪಕಲೆ ವಿಭಾಗಗಳಲ್ಲಿ ವಿಶೇಷ ಅಧ್ಯಯನದ ಸ್ನಾತಕೋತ್ತರ ಪದವಿಯಾಗಿರುತ್ತದೆ. ಪ್ರಥಮ ವರ್ಷದ ಮಾಸ್ಟರ್ ಆಫ್ ವಿಜ್ಯುವಲ್ ಆರ್ಟ್ಸ ( ಎಂ.ವಿ.ಎ) ಪ್ರವೇಶಾತಿಗಾಗಿ ಚಿತ್ರಕಲೆ ವಿಭಾಗ, ಗ್ರಾಫಿಕ್ಸ್ ವಿಭಾಗ ಮತ್ತು ಶಿಲ್ಪಕಲೆ ವಿಭಾಗಗಳಿಗೆ ಕಚೇರಿಯಿಂದ ಅರ್ಜಿಗಳನ್ನು ಪಡೆದು ಅಗಸ್ಟ 30 ರೊಳಗೆ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ ಹಾಗೂ ವೈಯಕಿಕ ಸಂದರ್ಶನದ ದಿನಾಂಕವನ್ನು ತಿಳಿಸಲಾಗುವುದು. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ದೂರವಾಣಿ ಸಂಖ್ಯೆ 0821-2438931 ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP